ಫಾಲ್ಘಾಟ್ : ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ರೋಡ್ ಶೋ ಪಾಲಕ್ಕಾಡ್‌ನಲ್ಲಿ ಮಂಗಳವಾರ ನಡೆಯಿತು. ಮರ್ಸಿ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಮಾರ್ಗವಾಗಿ ಕೋಟ ಮೈದಾನ ಅಂಚುವಿಳಕ್‌ನಿಂದ ಪ್ರಧಾನ ಅಂಚೆ ಕಚೇರಿ ತನಕ ರೋಡ್ ಶೋ ನಡೆಸಿದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪಾಲಕ್ಕಾಡ್ ಮರ್ಸಿ ಕಾಲೇಜ್ ಮೈದಾನಕ್ಕೆ ಆಗಮಿಸಿದ ಮೋದಿ, ರಸ್ತೆ ಮಾರ್ಗವಾಗಿ ಅಂಚುವಿಲಕ್ಕೆ ತಲುಪಿ ಅಲ್ಲಿಂದ ರೋಡ್ ಶೋದಲ್ಲಿ ಭಾಗವಹಿಸಿದರು.
ಹೂವಿನಿಂದ ಅಲಂಕರಿಸಿದ ತೆರೆದ ಕಾರಿನಲ್ಲಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಪಾಲಕ್ಕಾಡ್, ಪೊನ್ನಾನಿ ಮತ್ತು ಮಲಪುರ ಕ್ಷೇತ್ರಗಳ ಅಭ್ಯರ್ಥಿಗಳೊಂದಿಗೆ ಹೂವಿನಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ತೆರಳಿದರು. ಪಾಲಕ್ಕಾಡ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸಿ.ಕೃಷ್ಣಕುಮಾರ್ ಪರ ಮತಯಾಚಿಸಲು ಮೋದಿ ಪಾಲಕ್ಕಾಡ್‌ಗೆ ಆಗಮಿಸಿದ್ದರು. ಮೋದಿ ಭೇಟಿಗೆ ಮುನ್ನ ಪಾಲಕ್ಕಾಡ್ ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ರೋಡ್ ಶೋ ಅಂತ್ಯಗೊಂಡ ಬಳಿಕ ಪ್ರಧಾನಿಯವರು ಸೇಲಂಗೆ ಮರಳಿದರು.