ಮುಂಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಪೂರ್ವಭಾವಿಯಾಗಿ ಸೂಕ್ಷ್ಮ ಪ್ರದೇಶವಾದ ಗಂಗೊಳ್ಳಿಯಲ್ಲಿ ಪೋಲೀಸರಿಂದ ಪಥ ಸಂಚಲನ ನಡೆಯಿತು
ಸುಮಾರು 3.5KM ರೂಟ್ ಮಾರ್ಚ್ ನ್ನು ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಮಾನ್ಯ ಪೊಲೀಸ್ ವೃತ್ತನಿರೀಕ್ಷಕರು ಬೈಂದೂರು ರವರ ನೇತೃತ್ವದಲ್ಲಿ ,100 ಸಿಎಪಿಎಫ್ ಸಿಬ್ಬಂದಿಗಳು ಹಾಗೂ ಕುಂದಾಪುರ ಉಪವಿಭಾಗದ ಠಾಣಾ ಉಪನಿರೀಕ್ಷಕರು ಮತ್ತು 50 ಜನ ಸಿಬ್ಬಂದಿಗಳು ಗಂಗೊಳ್ಳಿಯ ವಿರೇಶ್ವರ ದೇವಸ್ಥಾನ ದಿಂದ ಪ್ರಾರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಮಮಂದಿರದಲ್ಲಿ ಮುಕ್ತಾಯಗೊಳಿಸಲಾಯಿತು
ಈ ಸಂಧರ್ಭದಲ್ಲಿ ಗಂಗೊಳ್ಳಿ ಯ ಮುಸ್ಲಿಂ ಮುಖಂಡರು ಮತ್ತು ಹಿಂದೂಗಳು ಮಾಲಾರ್ಪಣೆ ಮಾಡಿ ಹಾಗೂ ಹೂಗುಚ್ಛವನ್ನು ನೀಡಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು