ಕೋಟ : ರೋಟರಿ ಕ್ಲಬ್ ಶಂಕರನಾರಾಯಣ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಶಂಕರನಾರಾಯಣದಲ್ಲಿ ನಡೆದ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಸಮೂಹ ನೃತ್ಯ ಪ್ರಥಮ, ಪ್ರಹಸನ ಪ್ರಥಮ, ಏಕವ್ಯಕ್ತಿ ನೃತ್ಯ ಪ್ರಥಮ, ಹಾಗೂ ಏಕಪಾತ್ರಾಭಿನಯ ದ್ವಿತೀಯ ಸ್ಥಾನದೊಂದಿಗೆ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ , ನವೆಂಬರ್ ೧೦ ರಂದು ನಡೆಯಲಿರುವ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಲಬ್ ಅರ್ಹತೆ ಪಡೆದುಕೊಂಡಿದೆ. ಸಂಜೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಅವರು ಕ್ಲಬ್‌ನ ಅಧ್ಯಕ್ಷ ಅನಿಲ್ ಸುವರ್ಣ ಹಾಗೂ ಕಾರ್ಯದರ್ಶಿ ಪ್ರಕಾಶ ಪೂಜಾರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭ ವಲಯ ೨ರ ಸಹಾಯಕ ಗವರ್ನರ್ ಮಮತಾ ಆರ್. ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್, ವಲಯ ತರಬೇತುದಾರ ಸುರೇಶ್ ಬೇಳೂರು, ವಲಯ ಸಾಂಸ್ಕೃತಿಕ ಸಂಯೋಜಕ ಡಾ. ಸಚ್ಚಿದಾನಂದ ವೈದ್ಯ, ರೋಟರಿ ಶಂಕರನಾರಾಯಣ ಅಧ್ಯಕ್ಷ ದಯಾನಂದ ರಾವ್, ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಮಂದಿನ ಸಾಲಿನ ಸಹಾಯಕ ಗವರ್ನರ್ ಶ್ಯಾಮಸುಂದರ್ ನಾÊರಿ, ಕೋಟ ಸಿಟಿ ಸಂಸ್ಥೆಯ ಸಾಂಸ್ಕೃತಿಕ ಸಭಾಪತಿ ಡಾ. ಗಣೇಶ್, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ರೇವತಿ ಶ್ಯಾಮಸುಂದರ್ ಮುಂತಾದವರು ಉಪಸ್ಥಿತರಿದ್ದರು.