226
ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ಸೌತ್ ಕುಂದಾಪುರದ ಮಾನಸ ಜ್ಯೋತಿ ವಿಶೇಷ ಶಾಲೆಗೆ 20,000 ಮೊತ್ತದ ದೇಣಿಗೆ ನೀಡಿದೆ. ಈ ಯೋಜನೆಯನ್ನು ರೊ. ಮನೋಹರ್ ಪಿ. ಅವರು ಪ್ರಾಯೋಜಿಸಿದ್ದರು. ಅವರ ಹುಟ್ಟುಹಬ್ಬವನ್ನು ಆಚರಿಸಲು, ಕ್ಲಬ್ ಸದಸ್ಯರು ಶಾಲೆಯ ಮಕ್ಕಳಿಗೆ ಸಿಹಿತಿಂಡಿಗಳನ್ನು ಕೂಡ ವಿತರಿಸಿ ಸಂಭ್ರಮಿಸಿದರು
ಈ ಸಂದರ್ಭದಲ್ಲಿ ರೊ. ಮನೋಹರ್ ಪಿ., ಕ್ಲಬ್ ಅಧ್ಯಕ್ಷ ರೊ. ಸಚಿನ್ ನಕ್ಕತ್ತಾಯ, ರೊ. ಮನೋಹರ್ ಪಿ. ಅವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಶೋಭಾ ಮಧ್ಯಸ್ಥ ಉಪಸ್ಥಿತರಿದ್ದರು.

