ಕೋಟ : ರೋಟರಿಯಂತಹ ಸಮಾಜ ಸೇವಾ ಸಂಸ್ಥೆಯು ಸಮಾಜದಲ್ಲಿ ನೊಂದವರ,ಅಶ್ತಕರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಸಮಾಜದಲ್ಲಿ ಅರ್ಹ ವ್ಯಕ್ತಿಗಳನ್ನು ಗುರುತಿಸಿ ದಾನ ಮಾಡಬೇಕು.ಹಾಗೆ ಮಾಡಿದ ದಾನವು ಅರ್ಹ ಫಲಾನುಭವಿಗಳಿಗೆ ದೊರೆತಾಗ ದಾನ ಸಾರ್ಥಕವಾಗುತ್ತದೆ ಎಂದು ಕಟೀಲು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಇತ್ತೀಚೆಗೆ ರೋಟರಿ ಕ್ಲಬ್ ಕೋಟ ಸಿಟಿ ಮತ್ತು ಆ್ಯನ್ಸ್ ಕ್ಲಬ್ ಕೋಟ ಸಿಟಿ ಜಂಟಿ ಆಶ್ರಯದಲ್ಲಿ ನಡೆದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.ರೊಟರಿ ಅಧ್ಯಕ್ಷ ಅನಿಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಆ್ಯನ್ಸ್ ಕ್ಲಬ್ ಅಧ್ಯಕ್ಷೆ ರೇವತಿ ಶ್ಯಾಮಸುಂದರ್ ನಾೈರಿ,ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್,ಜೋನಲ್ ಲೆಫ್ಟಿನೆಂಟ್ ನಿತ್ಯಾನಂದ ನಾೈರಿ ಶುಭ ಹಾರೈಸಿದರು.ಕಾರ್ಯಕ್ರಮ ಸಭಾಪತಿ ಶ್ಯಾಮಸುಂದರ್ ನಾೈರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭ ನೂತನ ಸದಸ್ಯ ಯುವ ಉದ್ಯಮಿ ಭಾಸ್ಕರ್ ಪೂಜಾರಿ ಅವರನ್ನು ಮಾಜಿ ಸಹಾಯಕ ಗವರ್ನರ್ ಹಾಗೂ ಕ್ಲಬ್ ಮೆಂಬರ್‍ಶಿಪ್ ಚೇರ್‍ಮನ್ ಸತೀಶ್ ಶೆಟ್ಟಿ ಕ್ಲಬ್‍ಗೆ ಸೇರ್ಪಡೆಗೊಳಿಸಿದರು.ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್ ಆಚಾರ್ ದಂಪತಿಗಳ ವಿವಾಹ ವಾರ್ಷಿಕೋತ್ಸವ ಆಚರಿಸಲಾಯಿತು.ಮಾಜಿ ಅಧ್ಯಕ್ಷ ದಯಾನಂದ ಆಚಾರ್, ಕೃಷ್ಣ ಪೂಜಾರಿ ಅತಿಥಿಗಳ ಪರಿಚಯ ಮಾಡಿದರು.ಆ್ಯನ್ಸ್ ಸದಸ್ಯೆ ನಂದಿನಿ ಪ್ರಾರ್ಥಿಸಿ, ಕ್ಲಬ್ಬಿನ ಕಾರ್ಯದರ್ಶಿ ಪ್ರಾಕಾಶ್ ಪೂಜಾರಿ ವರದಿ ವಾಚಿಸಿದರು.ಮಾಜಿ ಅಧ್ಯಕ್ಷ ಸುರೇಶ್ ಆಚಾರ್ ಸ್ವಾಗತಿಸಿ, ಆ್ಯನ್ಸ್ ಕಾರ್ಯದರ್ಶಿ ಶಶಿಕಲಾ ಗಣೇಶ್ ಧನ್ಯವಾದ ನೀಡಿ, ಸುನಿಲ್ ಕಾರ್ಯಕ್ರಮ ನಿರೂಪಿಸಿದರು.