ಮಂಗಳೂರು : ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಿನ್ನೆ ಬೆಳಿಗ್ಗೆ 10-೦೦ ಗಂಟೆಯಿಂದ ಮಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ಸಕ್ರೀಯ ರೌಡಿಗಳ ಪರೇಡ್ನ್ನು ನಡೆಸಲಾಯಿತು
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಮಂಗಳೂರು ನಗರದ ಪೊಲೀಸ್ ಕಮೀಶನರೇಟ್ ವ್ಯಾಪ್ತಿಯ 14 ಪೊಲೀಸ್ ಠಾಣೆಗಳ ಒಟ್ಟು 250 ರೌಡಿಗಳು ರೌಡಿ ಪೆರೇಡ್ನಲ್ಲಿ ಭಾಗವಹಿಸಿದ್ದರು. ಇವರೆಲ್ಲಾ ಕೊಲೆ ಕೋಮುಗಲಭೆ ನೈತಿಕ ಪೊಲೀಸ್ ಗಿರಿ ಮುಂತಾದ ಅಪರಾದ ಕೃತ್ಯಗಳಲ್ಲಿ ಭಾಗಿಯಾದವರಾಗಿದ್ದಾರೆ
ಎಲ್ಲಾ ರೌಡಿಗಳಿಗೆ ತಮ್ಮ ಅಪರಾಧಿಕ ಚಟುವಟಿಕೆಗಳನ್ನು ಬಿಟ್ಟು ಕಾನೂನನ್ನು ಗೌರವಿಸುವ ಪ್ರಜೆಗಳಾಗಬೇಕೆಂದು ಪೊಲೀಸ್ ಆಯುಕ್ತರು ಉಪದೇಶಿಸಿದರು ಇದಲ್ಲದೇ ರೌಡಿಗಳು ಇನ್ನು ಮುಂದೆ ಯಾವುದಾದರೂ ಅಪಾರಾಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅವರ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದೆಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿ ಇಲ್ಲಿನ 10 ರೌಡಿಗಳನ್ನು ಗಡಿಪಾರು ಮಾಡುತ್ತೇವೆ ಎಂದರು
ಈ ಪರೇಡ್ನಲ್ಲಿ ಶ್ರೀ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ, ಶ್ರೀ ಬಿಪಿ ದಿನೇಶ್ ಕುಮಾರ್ ಡಿಸಿಪಿ ಅಪರಾಧ ಮತ್ತು ಸಂಚಾರ, ನಗರದ ಎಲ್ಲಾ ಎಸಿಪಿರವರು ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು ಭಾಗವಹಿಸಿದ್ದರು