ಕುಂದಾಪುರ : ನಗರದ ಚಿಕ್ಕನ್‌ಸಾಲ್ ರಸ್ತೆಯಲ್ಲಿರುವ ರೋಯಲ್ ಕ್ಲಬ್ ಸಂಸ್ಥೆಯ ನವೀಕೃತ ರೋಯಲ್ ಸಭಾಭವನವನ್ನು ಕುಂದಾಪುರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಉಧ್ಘಾಟಿಸಿದರು ಅವರು ಮಾತನಾಡಿ ಕಳೆದ 39 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡೆಗಿಸಿಕೊಂಡು ಬಂದಂತಹ ರೋಯಲ್ ಕ್ಲಬ್ ಸಂಸ್ಥೆಯ ಕಾರ್ಯ ಪ್ರಶಂಸನೀಯವಾಗಿದ್ದು ಮುಂದಿನ ದಿನಗಳಲ್ಲಿ ನೂತನ ಸಭಾ ಭವನದ ಮೂಲಕ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು
ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರದ ಯೋಜನಾಧಿಕಾರಿಗಳಾದ ಶ್ರೀಮತಿ ಪಾರ್ವತಿ ರೋಯಲ್ ಸಭಾಭವನ ಕಟ್ಟಡ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಬಿ ನಾಯಕ್ ಹಾಗೂ ಸಂಸ್ಥೆಯ ಕಾರ್ಯದರ್ಶಿ ನಿತ್ಯಾನಂದ ಕೆ ಉಪಸ್ಥಿತರಿದ್ದರು
ಮಹೇಶ್ ಬೆಟ್ಟಿನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ಮಾಣಿಮನೆ ಸ್ವಾಗತಿಸಿ ಶಂಕರ್ ಕಂಚುಗಾರ್ ಪ್ರಾರ್ಥಿಸಿ ಪ್ರಕಾಶ್ ಕೆ ಧನ್ಯವಾದ ಸಮರ್ಪಿಸಿದರು
ಸಮಾರಂಭದಲ್ಲಿ ರೋಯಲ್ ಕ್ಲಬ್ ನ ಮಾಜಿ ಅಧ್ಯಕ್ಷರುಗಳಾದ ರಾಧಾಕೃಷ್ಣ ಯು ಮಹೇಶ್ ಬೆಟ್ಟಿನ್ ಯು ಕೃಷ್ಣಮೂರ್ತಿ ಅಶೋಕ್ ಬೆಟ್ಟಿನ್ ಪ್ರಕಾಶ್ ಬೆಟ್ಟಿನ ಕೆ ಬಿ ವಿಷ್ಣು ಪ್ರಕಾಶ್ ಗಣೇಶ್ ಬೆಟ್ಟಿನ್ ಮತ್ತು ಸದಸ್ಯರು ಉಪಸ್ಥಿತರಿದ್ದರು

