ಕುಂದಾಪುರ : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವಿಟ್ ಲಿಮಿಟೆಡ್ ಕಂಪನಿಯಿಂದ ಆಯೋಜಿಸಿದ್ದ 20 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯು ಬೆಂಗಳೂರಿನಲ್ಲಿ ನಡೆದಿದ್ದು ಇದರಲ್ಲಿ ಮೊದಲನೇ ವಿಭಾಗದ ಕಿರಿಯರ ಸ್ಪರ್ಧೆಯಲ್ಲಿ ಕೋಡಿ ಶ್ರೀರಾಮ ವಿದ್ಯಾಕೇಂದ್ರದ ಒಂದನೇ ತರಗತಿ ವಿದ್ಯಾರ್ಥಿನಿ ಪ್ರಣಮಿ ಖಾರ್ವಿ ನೂರಕ್ಕೆ ನೂರು ಲೆಕ್ಕ 5 ನಿಮಿಷದಲ್ಲಿ ಮಾಡಿ ಚಾಂಪಿಯನ್ ಪಟ್ಟ ಪಡೆದುಕೊಂಡಿದ್ದಾಳೆ ಇವಳು ಶ್ರೀಮತಿ ಜ್ಯೋತಿ ಮತ್ತು ಪ್ರವೀಣ್ ಖಾರ್ವಿ ಅವರ ಪುತ್ರಿಯಾಗಿದ್ದಾಳೆ 5 ನೇ ತರಗತಿ ವಿದ್ಯಾರ್ಥಿನಿ ನವಮಿ ಖಾರ್ವಿ ಪ್ರಥಮಹಾಗೂವೀಕ್ಷಿತಾ ನಾಲ್ಕನೇಸ್ಥಾನ ಪಡೆದಿದ್ದಾರೆ
ಇವರಿಗೆ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ನಾಗೇಶ್ ಕಾಮತ್ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಶಾಲೆಯ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ