ಕೋಟ : ಕನ್ನಡ ಪರ ಬೇಡಿಕೆಗಳಿಗೆ ಸರಕಾರದ ನಿರ್ಲಕ್ಷ್ಯ ಧೋರಣೆ ಮೊದಲು ನಿಲ್ಲಬೇಕು ಹಾಗೂ ಆಡಳಿತ ವ್ಯವಸ್ಥೆ ಕನ್ನಡ ಶಾಲೆಗಳಿಗೆ, ಸಾಹಿತ್ಯಕೆ ನೀಡಿದ ಪ್ರೋತ್ಸಾಹದ ಕುರಿತು ಆತ್ಮವಲೋಕನ ಮಾಡಿಕೊಳ್ಳಬೇಕು ಆಗ ಮಾತ್ರ ಬದಲಾವಣೆ ಸಾಧ್ಯ ಎಂದು ಬ್ರಹ್ಮಾವರ ತಾಲೂಕು ಸಮ್ಮೇಳನಾಧ್ಯಕ್ಷ, ಶಿಕ್ಷಕ ಪಾರಂಪಳ್ಳಿ ನರಸಿಂಹ ಐತಾಳ ತಿಳಿಸಿದರು.
ಅವರು ಕ.ಸಾ.ಪ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕ ಆಶ್ರಯದಲ್ಲಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ ಸಹಕಾರದಲ್ಲಿ ಜೂ.11ರಂದು ಸಾಲಿಗ್ರಾಮ-ಪಾರಂಪಳ್ಳಿಯ ಮಹಾವಿಷ್ಣು ಸಭಾಂಗಣದಲ್ಲಿ ಜರಗಿದಬ್ರಹ್ಮಾವರ ತಾಲೂಕು 4ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಈ ಅನಿಸಿಕೆ ವ್ಯಕ್ತಪಡಿಸಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಕನ್ನಡ ಶಾಲೆಯಲ್ಲಿ ಕಲಿತವರೇ ಆಡಳಿತ, ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಆದರೂ ಕನ್ನಡ ಬಡವಾಗುತ್ತಿರುವುದು ನಮ್ಮ ಅಭಿಮಾನ ಶೂನ್ಯತೆಗೆ ಸಾಕ್ಷಿಯಾಗಿದೆ ಎಂದರು. ಸಾಂಸ್ಕೃತಿಕ ಚಿಂತಕ ಆನಂದರಾಮ ಉಡುಪ ಚಿತ್ರಪಾಡಿ ಸಮಾರೋಪ ಭಾಷಣಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಅವರು ಶುಭ ಹಾರೈಸಿದರು. ಸಾಧಕರಿಗೆ ಸಮ್ಮಾನ :
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ, ಸಾಧಕ ಸಂಸ್ಥೆಗಳಿಗೆ, ಸಮ್ಮೇಳನದ ಸರ್ವಾಧ್ಯಕ್ಷ ನರಸಿಂಹ ಐತಾಳ ದಂಪತಿಗಳನ್ನು ಸಮ್ಮಾನಿಸಲಾಯಿತು. ಉದ್ಯಮಿ ಗುಂಡ್ಮಿ ನರಸಿಂಹ ಐತಾಳ ಸಮ್ಮಾನ ನೆರವೇರಿಸಿದರು. ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವಡ, ಸಾಂಸ್ಕೃತಿಕ ಚಿಂತಕ ಶೇಡಿಕೊಡ್ಲು ವಿಟ್ಠಲ ಶೆಟ್ಟಿ, ಕ.ಸಾ.ಪ. ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ
ರಾಮಚಂದ್ರ ಐತಾಳ, ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕ.ಸಾ.ಪ. ಪದಾ„ಕಾರಿಗಳಾದ ನರೇಂದ್ರ ಕುಮಾರ್ ಕೋಟ, ಅಚ್ಯುತ್ ಪೂಜಾರಿ, ಉದ್ಯಮಿ ರಾಮಚಂದ್ರ ಉಪಾಧ್ಯ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ ಇದ್ದರು. ನಾಗರಾಜ್ ಅಲ್ತಾರು ಸ್ವಾಗತಿಸಿ, ಸತೀಶ್ ವಡ್ಡರ್ಸೆ ನಿರೂಪಿಸಿ ಮಾರುತಿ ಕೆ.ಪಿ. ವಂದಿಸಿದರು.