ಕೋಟ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಕ್ಕಳ ಸಾಹಿತ್ಯ ವೇದಿಕೆ ಸಾಲಿಗ್ರಾಮ ಇವರು ಪ್ರತಿವರ್ಷದಂತೆ ನಡೆಸಲಿರುವ ಎಂಟನೆಯ ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜನವರಿ ಎರಡನೆಯ ವಾರದಲ್ಲಿ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಅದರ ಸರ್ವಾಧ್ಯಕ್ಷರ ಆಯ್ಕೆಗಾಗಿ ಸಂದರ್ಶನವನ್ನು ಇದೇ ತಿಂಗಳ 15 ಭಾನುವಾರ ಬೆಳಗ್ಗೆ10.00 ಗಂಟೆಗೆ ಕೋಟದ ಪೆಟ್ರೋಲ್ ಪಂಪಿನ ಪೂರ್ವದ ಈ ಹಿಂದಿನ ಕೋಟದ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ನಡೆಸಲಾಗುವುದು. ಕೇವಲ ಸಾಹಿತ್ಯದ ಅಂಶಗಳನ್ನು ಪರಿಗಣಿಸಲಾಗುವುದರಿಂದ ಅವುಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಪದವಿ ಪೂರ್ವ ತರಗತಿಯವರೆಗಿನ ವಿದ್ಯಾರ್ಥಿಗಳು ಆ ದಿನ ಭಾಗವಹಿಸಬಹುದು.
ಗೋಷ್ಠಿಗಳಲ್ಲಿ ಭಾಗವಹಿಸುವವರ ಆಯ್ಕೆಗಾಗಿ ಕಥೆಯನ್ನು ಇನ್‌ಲ್ಯಾನ್ಡ್ ಕವರಿನಲ್ಲಿ, ಕವಿತೆಯನ್ನು ಅಂಚೆ ಕಾರ್ಡಿನಲ್ಲಿ ಬರೆದು – ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಸಾಲಿಗ್ರಾಮ – 576224 ಇವರಿಗೆ ತಾರೀಕು 22 ಶುಕ್ರವಾರದೊಳಗೆ ತಲುಪುವಂತೆ ಕಳುಹಿಸಿ ಕೊಡುವುದು. ಹೆಚ್ಚಿನ ಮಾಹಿತಿಗಾಗಿ 9740842722 ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.