Home » ಶ್ರೀರಾಮ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ
 

ಶ್ರೀರಾಮ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ

by Kundapur Xpress
Spread the love

ಕೋಟ : ಇಲ್ಲಿನ ಸಾಲಿಗ್ರಾಮದ ವಾಹನ ಚಾಲಕ ಮಾಲಕರ ಸಂಘದ ವತಿಯಿಂದ ಅಯೋಧ್ಯಾಪತಿ ಶ್ರೀರಾಮ ಪ್ರಾಣ ಪ್ರತಿಷ್ಠೆಯ ವರ್ಷಾಚರಣೆಯ ಅಂಗವಾಗಿ ಶ್ರೀರಾಮ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ನೆರವೆರಿತು.
ಸಂಜೆ ಸುಮಾರು 6.00 ಗಂಟೆಗೆ ಸಾಲಿಗ್ರಾಮ ಬಸ್ ನಿಲ್ದಾಣದ ಸಮೀಪ ಸಹಸ್ರ ಸಂಖ್ಯೆಯ ಶ್ರೀರಾಮ ಭಕ್ತ ಸಮೂಹದ ನಡುವೆ ಭಜನೆ ಇನ್ನಿತರ ಪೂಜಾ ಕಾರ್ಯಗಳು ನಡೆದವು. ಈ ಹಿನ್ನಲ್ಲೆಯಲ್ಲಿ ಭಕ್ತಾಧಿಗಳಿಗೆ ಪನಿವಾರ ಪ್ರಸಾದ ವಿತರಣೆ ಕೂಡಾ ನಡೆಯಿತು.
ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಶಿವರಾಮ ಉಡುಪ ಉದ್ಘಾಟಿಸಿದರು ಸ್ಥಳೀಯರಾದ ನಾಗರಾಜ್ ಮಯ್ಯ, ಸುರೇಂದ್ರ ಗಾಣಿಗ, ವಾಹನ ಚಾಲಕರು ಮತ್ತು ಮಾಲೀಕರು ಸಾಲಿಗ್ರಾಮ ಇದರ ಸದಸ್ಯರು ,ಮತ್ತಿತರರು ಉಪಸ್ಥಿತರಿದ್ದರು

 

Related Articles

error: Content is protected !!