Home » ಕಸದಿಂದ ಸಿದ್ಧಗೊಂಡ ನವನವೀನ ಮಾದರಿಯ ಕಲಾಕೃತಿ
 

ಕಸದಿಂದ ಸಿದ್ಧಗೊಂಡ ನವನವೀನ ಮಾದರಿಯ ಕಲಾಕೃತಿ

by Kundapur Xpress
Spread the love

ಕಾರ್ಕಡ – ಕಸದಲ್ಲೆ ಸಿದ್ಧಗೊಂಡಿತು ನವನವೀನ ಮಾದರಿಯ ಕಲಾಕೃತಿ,ಕೊನೆಗೂ ಬ್ಲ್ಯಾಕ್ ‌ ಸ್ಟಾಟ್‌ಗೆ ಸಿಕ್ಕಿತು ಮುಕ್ತಿ
ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ಸ್ವಚ್ಛಭಾರತದ ಪರಿಕಲ್ಪನೆ ಒಂದು ಹೆಜ್ಜೆ ಮುಂದೆ ಇರಿಸಿ ಕಾರ್ಯಾಚರಿಸುತ್ತಿದೆ ಇದಕ್ಕೆ ಇತ್ತೀಚಿಗಿನ ಕೆಲ ಕಾರ್ಯವೈಕರಿಗಳೇ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಕಂಡ ಕಂಡಲ್ಲಿ ಕಸ ಎಸೆಯುವ ಮನಸ್ಥಿತಿಯಲ್ಲಿ ಜನಸಮುದಾಯ ಇದ್ದರೆ,ಪ್ಲಾಸ್ಟಿಕ್‌ನ ಬಗ್ಗೆ ಆಗಾಗ ಜಾಗೃತಿಗೊಳಿಸಿ ದಂಡ ಸೇರಿದಂತೆ ಇನ್ನಿತರ ಕ್ರಮಗಳನ್ನು ಪಟ್ಟಣ ಪಂಚಾಯತ್ ಕೈಗೊಳ್ಳುತ್ತಿದೆ. ಇತ್ತ ಕಸ ಎಸೆಯುವ ಮನಸ್ಥಿತಿ ಬದಲಾದಂತೆ ಕಾಣುತ್ತಿಲ್ಲ ಈ ದಿಸೆಯಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ದಿಟ್ಟ ಹೆಜ್ಜೆ ಇರಿಸಿ ಕಸ ಎಸೆಯುವ ಸ್ಥಳಗಳನ್ನು ಗುರುತು ಮಾಡಿ ಅಲ್ಲಿ ಸಿಸಿ ಕ್ಯಾಮರ ಅಳವಡಿಸಿ ಕಸ ಎಸೆಯುವ ಕೈಗೆ ಬಿಸಿ ಮುಟ್ಟಿಸಲು ಮುಂದಾಗಿದೆ, ಅಲ್ಲದೆ ಅಂತಹ ಸ್ಥಳಗಳನ್ನು ಬ್ಲ್ಯಾಕ್ ‌ ಸ್ಪಾಟ್‌ಗಳಾಗಿಸಿ ಅಲ್ಲಿ ಎಸೆದ ಕಸದಲ್ಲೆ ವಿವಿಧ ತರಹದ ಮಾದರಿಗಳನ್ನು ಸಿದ್ಧಪಡಿಸಿ ಜನಸಾಮಾನ್ಯರಿಗೆ ಜಾಗೃತಿ ಸಂದೇಶಗಳನ್ನು ನೀಡುತ್ತಿದೆ.ಇದಕ್ಕೆ ಪಟ್ಟಣಪಂಚಾಯತ್ ವ್ಯಾಪ್ತಿಯ ಗುಂಡ್ಮಿ ಟೋಲ್ ಸಮೀಪ ಇದೇ ಮಾದರಿಯನ್ನು ನಿರ್ಮಿಸಿ ಕಸಕ್ಕೆ ಮುಕ್ತಿ ಗಾಣಿಸಿದ್ದು ನಮ್ಮ ಕಣ್ಮುಂದಿದೆ, ಇದಾದ ನಂತರ ಮತ್ತೊಂದು ಪ್ರದೇಶವಾದ ಕಾರ್ಕಡದಿಂದ ಕಾವಡಿ ಸಂಪರ್ಕಿಸುವ ಕಾರ್ಕಡ ಮುಡೋಳಿ ಭಾಗದಲ್ಲೂ ಈ ರೀತಿಯ ಮಾದರಿಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದೆ.

ಪೌರಕಾರ್ಮಿಕರಿಂದಲೇ ಸಿದ್ಧಗೊಂಡಿತು ಮಾದರಿಗಳು
ಕಸದಿಂದ ರಸ ಎಂಬ ಮಾತಿನಯುಕ್ತಿಯಂಬAತೆ ಸಾಲಿಗ್ರಾಮ ಪಟ್ಟಣಪಂಚಾಯತ್ ಪೌರಕಾರ್ಮಿಕರು ಕಸವನ್ನು ಕಲೆಹಾಕುವುದಕ್ಕೆ ಸೀಮಿತವಾಗದೆ ಅದರಲ್ಲಿ ವಿವಿಧ ತರಹದ ಕಲಾಕೃತಿಗಳನ್ನು ನಿರ್ಮಿಸಿ ಬ್ಲ್ಯಾಕ್ ‌ಸ್ಪಾಟ್ ಪ್ರದೇಶಗಳಿಗೆ ಹೊಸ ಮೆರುಗು ನೀಡಿದ್ದಾರೆ.ಪಟ್ಟಣಪಂಚಾಯತ್ ಪೌರಕಾರ್ಮಿಕರಾದ ಸೂರ್ಯ ಹಾಗೂ ಭೂತೇಶ್ ಈ ಕಾರ್ಯದಲ್ಲಿ ಕೈಜೋಡಿಸಿಕೊಂಡಿದ್ದಾರೆ.ಈ ಕೈಂಕರ್ಯಕ್ಕೆ ಪಟ್ಟಣಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ಮತ್ತು ಸ್ಯಾನಿಟರಿ ಸೂಪರ್‌ವೈಸರ್ ಶಿವರಾಜ್ ಸಾಥ್ ನೀಡಿದ್ದಾರೆ.

ಅಧ್ಯಕ್ಷೆ,ಮುಖ್ಯಾಧಿಕಾರಿ ವೀಕ್ಷಣೆ
ಸಾಲಿಗ್ರಾಮ ಪಟ್ಟಣಪಂಚಾಯತ್ ವಿವಿಧ ಭಾಗಗಳ ಬ್ಲ್ಯಾಕ್ ‌ ಸ್ಪಾಟ್‌ಗಳನ್ನು ಗುರುತು ಪತ್ತೆ ಹಚ್ಚಿ ಅಲ್ಲಿ ಬದಲಿ ಮಾರ್ಗೋಪಾಯಗಳ ಕ್ರಮಗಳ ಬಗ್ಗೆ ಪಟ್ಟಣ ಪಂಚಾಯತ್ ಬೋಡ್೯ ಅಂದರೆ ಪ್ರಸ್ತುತ ಅಧ್ಯಕ್ಷೆ ಸುಕನ್ಯಾ ಜಗದೀಶ್ ಹಾಗೂ ಮುಖ್ಯಾಧಿಕಾರಿ ಅರ್ಜುನ್ ಭಂಡಾರ್ಕರ್ ,ಉಪಾಧ್ಯಕ್ಷೆ ಗಿರಿಜಾ ಪೂಜಾರಿ ಆ ಭಾಗದ ವಾಡ್೯ ಸದಸ್ಯ ಸಂಜೀವ ದೇವಾಡಿಗ ಕಂದಾಯ ನಿರೀಕ್ಷಕ ದೀಪಕ್.ಎಂ ಪರಿಶೀಲಿಸಿ ಪೌರಕಾರ್ಮಿಕರ ಕಾರ್ಯವೈಕರಿಯನ್ನು ಕೊಂಡಾಡಿದ್ದಾರೆ.

ವಿವಿಧ ತರಹ ಮಾದರಿ
ಕಸ ಎಸೆದ ಸ್ಥಳದಲ್ಲೇ ಸಿಕ್ಕ ವಾಟರ್ ಕ್ಯಾನ್ ಮೂಲಕ ಕಾಪು ದೀಪಸ್ತಂಭ ಹೊಲುವ ಮಾದರಿ,ಮಧ್ಯ ಬಾಟಲಿಗೆ ಬಣ್ಣ ಲೇಪಿಸಿ ಕಣ್ಮನ ಸೆಳೆಯುವಂತೆ ಮಾಡಲಾಗಿದೆ, ಅಲ್ಲದೆ ವಾಹನಗಳ ಟೈಯರ್‌ಗೆ ಚಿತ್ರ ಬಿಡಿಸಲಾಗಿದ್ದು,ತೆಂಗಿನ ಎಳನೀರ ಬೊಂಡ,ತೆAಗಿನ ಗರಟೆಗೆ ವಿವಿಧ ತರಹದ ಬಣ್ಣ ಲೇಪಿಸಲಾಗಿದೆಲ್ಲದೆ ಅನೇಕ ರೀತಿಯ ಮಾದರಿಗಳನ್ನು ನಿರ್ಮಿಸಲಾಗಿದ್ದು ಜನಸಾಮಾನ್ಯರ ನಿಬ್ಬೆರಗಾಗಿಸುವಂತೆಮಾಡಲಾಗಿದೆ.

ಈಗಾಲೇ ವಿವಿಧ ಭಾಗಗಳ ಬ್ಲ್ಯಾಕ್ ‌ಸ್ಪಾಟ್‌ಗಳಲ್ಲಿ ಸಿಕ್ಕ ವಸ್ತುಗಳನ್ನು ಬಳಸಿಕೊಂಡು ಅದರಲ್ಲಿ ವಿವಿಧ ತರಹದ ಚಿತ್ರಗಳನ್ನು ನಾವುಗಳೇ ಮಾಡಿದ್ದೇವೆ,ಕಸದಿಂದ ರಸ ತೆಗೆಯಲು ಸಾಧ್ಯವಿದೆ ಎಂಬುವುದಕ್ಕೆ ಇದೇ ನಿದರ್ಶನವಾಗಿದೆ.
ಸೂರ್ಯ ಪೌರಕಾರ್ಮಿಕರು ಪಟ್ಟಣಪಂಚಾಯತ್ ಸಾಲಿಗ್ರಾಮ

ಜನಸಾಮಾನ್ಯರಿಗೆ ಕಸದ ಬಗ್ಗೆ ಈಗಾಗಲೇ ಜಾಗೃತಿಯ ಕಾರ್ಯಕ್ರಮ ಪಟ್ಟಣಪಂಚಾಯತ್ ವತಿಯಿಂದ ನೀಡಲಾಗಿದೆ.ಇಷ್ಟಿದ್ದು ಇನ್ನು ಕೆಲ ಭಾಗದಲ್ಲಿ ಕಸದ ಕೊಂಪೆಯಾಗಿಸುತ್ತಿರುವ ಹಿನ್ನಲ್ಲೆಯನ್ನು ಮನಗಂಡು ಈ ರೀತಿಯ ಮಾದರಿ ಕೇಂದ್ರವಾಗಿಸುತ್ತಿದ್ದೇವೆ ಅಲ್ಲದೆ ವಿವಿಧ ಭಾಗಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿ ಅಂತಹ ಸ್ಥಳದಲ್ಲಿ ಕಸ ಎಸೆದರವರಿಗೆ ದಂಡ ಕೂಡಾ ವಿಧಿಸಲಾಗುತ್ತಿದೆ.ಪೌರ ಕಾರ್ಮಿಕ ಸೂರ್ಯ ಅತ್ಯುತ್ತಮ ಕಾರ್ಯವೈಕರಿಗೆ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು  ಸುಕನ್ಯ ಜಗದೀಶ್ ಅಧ್ಯಕ್ಷರು ಪಟ್ಟಣಪಂಚಾಯತ್ ಸಾಲಿಗ್ರಾಮ ಇವರು ತಿಳಿಸಿದ್ದಾರೆ

 

Related Articles

error: Content is protected !!