Home » ತಡೆಯೊಡ್ಡಿದ ಕಾಮಗಾರಿಗೆ ಮುಖ್ಯಾಧಿಕಾರಿಯಿಂದ ಬೂಸ್ಟರ್
 

ತಡೆಯೊಡ್ಡಿದ ಕಾಮಗಾರಿಗೆ ಮುಖ್ಯಾಧಿಕಾರಿಯಿಂದ ಬೂಸ್ಟರ್

by Kundapur Xpress
Spread the love

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಳೀಯ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಮನೆಯೊರ್ವರ ತರ್ಕದಿಂದ ನೆನೆಗುದ್ದಿಗೆಗೆ ಬಿದ್ದಿದ್ದು, ಪ್ರಕರಣವನ್ನು ಪ್ರಸ್ತುತ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಮಧ್ಯಸ್ಥಿಕೆಯಲ್ಲಿ ಪುನರಾಂಭಗೊAಡ ಘಟನೆ ನಡೆದಿದೆ.
ಪಟ್ಟಣಪಂಚಾಯತ್ ಪಾರಂಪಳ್ಳಿ ವಾಡ್೯ನಲ್ಲಿ ಪಟ್ಟಣಪಂಚಾಯತ್ ಅನುದಾನದಡಿ 2.80ಲಕ್ಷ ರೂಪಾಯಿಯಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕಾಮಗಾರಿಗೆ ಸ್ಥಳೀಯ ಮನೆಯೊರ್ವರು ತರ್ಕ ತೆಗೆದಿದ್ದು ಇದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ಈ ಹಿನ್ನಲ್ಲೆಯಲ್ಲಿ ಮಧ್ಯಪ್ರವೇಶಿಸಿದ ಶಾಸಕರು,ಪಟ್ಟಣಪಂಚಾಯತ್ ಆಗಿನ ಅಧ್ಯಕ್ಷ,ಮುಖ್ಯಾಧಿಕಾರಿಗಳ ಮನವೊಲಿಕೆ ಯತ್ನಕ್ಕೂ ಬಗ್ಗದ ಮನೆಯವರು ಇದೀಗ ಏಕಾಏಕಿ ಪ್ರಸ್ತುತ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷೆ ಸುಕನ್ಯಾ ಜಗದೀಶ್,ವಾಡ್೯ ಸದಸ್ಯೆ ರೇಖಾ ಕೇಶವ್ ಮುಂದಾಳತ್ವದಲ್ಲಿ ಕ್ಯಾತೆ ತೆಗೆದ ಮನೆಯವರನ್ನು ಮನವೊಲಿಸಲು ಸಫಲರಾಗಿದ್ದಾರೆ.
ಇದೀಗ ಕಾಮಗಾರಿ ಆರಂಭಗೊಂಡಿದ್ದು ಸ್ಥಳೀಯರಲ್ಲಿ ಸಂತಸ ವ್ಯಕ್ತವಾಗಿದೆ ಸಾಮಾನ್ಯವಾಗಿ ಪ್ರತಿಯೊಂದು ಭಾಗದಲ್ಲಿ ಚರಂಡಿ ಸಮಸ್ಯೆ ಎದುರಿಸುತ್ತಿದ್ದು ಈ ಹಿನ್ನಲ್ಲೆಯಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಹೊರತ್ತಾಗಿಲ ಹೆಚ್ಚಿನ ರಸ್ತೆಗಳು ಚರಂಡಿ ಸಮಸ್ಯೆ ಎದುರಿಸುತ್ತಿದ್ದು ಇದೀಗ ಖಡಕ್ ಮುಖ್ಯಾಧಿಕಾರಿ ಕಾರ್ಯವೈಕರಿಯಿಂದ ವ್ಯಾಪಕ ಪ್ರಶಂಸೆ ಕೂಡಾ ವ್ಯಕ್ತವಾಗಿದೆ.

ಯಾರಿಗೂ ಬಗ್ಗದವರು ಮುಖ್ಯಾಧಿಕಾರಿಗೆ ಶರಣು ಎಂದರು…!

ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ ರಸ್ತೆಯೊಂದರ ಪ್ರಕರಣ ಹೊರತುಪಡಿಸಿ ಇಲ್ಲಿನ ಬಹುಪಾಲು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ಹಿಂದಿನ ಮುಖ್ಯಾಧಿಕಾರಿಗಳು ಮೃದು ದೋರಣೆ ಅನುಸರಿಸುತ್ತಿದ್ದು ಈ ಹಿನ್ನಲ್ಲೆಯಲ್ಲಿ ಕ್ಯಾತೆ ತೆಗೆದು ನೆನೆಗುದ್ದಿಗೆ ಬಿದ್ದ ಪ್ರಕರಣಗಳು ಸಾಕಷ್ಟಿವೆ ಆದರೆ ಇದೀಗ ಅಧಿಕಾರ ವಹಿಸಿಕೊಂಡು ಪ್ರಕರಣವನ್ನು ತನ್ನ ಅಧಿಕಾರಿದ ಪರಿಮಿತಿಯೊಳಗೆ ಕಾನೂನಿನ ಚೌಕಟ್ಟನ್ನಿರಿಸಿ ಮನೆಯವೊರ್ವರಿಗೆ ಮನವರಿಕೆ ಮಾಡಿ ಕಾಮಗಾರಿಗೆ ಮುಖ್ಯಾಧಿಕಾರಿ ಅಜೇಯ್ ವೇಗ ನೀಡಿದ್ದಾರೆ.

ಇದರೊಂದಿಗೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದೆ.ಇತ್ತೀಚಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಾಧಿಕಾರಿ ಅಜೇಯ ಪಟ್ಟಣಪಂಚಾಯತ್ ನಗದು ರಹಿತ ,ಲಂಚ ರಹಿತ ವ್ಯವಹಾರಕ್ಕೆ ಮುನ್ನುಡಿ ಇರಿಸಿದ್ದಾರೆ ಇದಾದ ನಂತರ ಒಂದೊಂದೆ ಸಮಸ್ಯೆಗಳನ್ನು ಮುಖ್ಯಾಧಿಕಾರಿ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುತ್ತಿದೆ.ಇದರಿಂದ ಆಡಳಿತ ವ್ಯವಸ್ಥೆಗೆ ವೇಗ ದೊರಕುತ್ತಿದೆ.

ಸಾಥ್ ನೀಡಿದ ಇಲಾಖೆ.

ಈ ಪ್ರಕರಣದಲ್ಲಿ ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು, ಮತ್ತು ಪೌರಕಾರ್ಮಿಕರು ಮತ್ತು ಸಿಬ್ಬಂದಿವರ್ಗದವರು ಹಾಗೂ ಕೋಟ ಪೋಲೀಸ್ ಆರಕ್ಷಕ ಅಧಿಕಾರಿಯವರು ಸ್ಳಳಕ್ಕೆ ಭೇಟಿ ನೀಡಿ ತಡೆಯೊಡ್ಡಿದ 2 ಮನೆಯವರಿಗೆ ಚರಂಡಿ ನಿರ್ಮಾಣಗೈಯಲು ಸಹಕರಿಸುವಂತೆ ಮುಖ್ಯಾಧಿಕಾರಿ ,ಅಧ್ಯಕ್ಷರಿಗೆ ಸಾಥ್ ನೀಡಿದರು. ಸ್ಥಳೀಯ ಮುಖಂಡರಾದ ರೇಖಾ ಕೇಶವ ಕರ್ಕೇರ ಮತ್ತು ಗುತ್ತಿಗೆದಾರ ಹರ್ಷ ಉಪಸ್ಥಿತರಿದ್ದರು.

 

Related Articles

error: Content is protected !!