Home » ಶ್ರೀ ಗುರುನರಸಿಂಹ ದೇವರ ಭವ್ಯ ದರ್ಶನ
 

ಶ್ರೀ ಗುರುನರಸಿಂಹ ದೇವರ ಭವ್ಯ ದರ್ಶನ

ಸಾಲಿಗ್ರಾಮ

by Kundapur Xpress
Spread the love

ಕೋಟ : ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದಲ್ಲಿ ಸೂರ್ಯೋದಯಕ್ಕೂ ಮುನ್ನ ಹಬ್ಬದ ವಾತಾವರಣ ಎಂಬಂತೆ ಜನಸಾಗರದ ನಡುವೆ ಗುರುವಿನ ಭವ್ಯ ದರ್ಶನ ಕಾರ್ಯಕ್ರಮ ಜರಗಿತು.
ದೇಗುಲದ ತಂತ್ರಿಗಳಾದ ಕೃಷ್ಣ ಸೋಮಯಾಜಿಯವರ ನೇತೃತ್ವದಲ್ಲಿ ಋತ್ವಿಜರಿಂದ ರುದ್ರ ಪಠಣ, ಶ್ರೀ ದೇವರಿಗೆ ಪಂಚಾಮೃತ ಸಹಿತ ರುದ್ರಾಭಿಷೇಕದ ನಂತರ ದೇವಳದಾದ್ಯಂತ ಸಾಲಂಕೃತವಾಗಿ ಸಜ್ಜುಗೊಳಿಸಿದ್ದ ದೀಪ, ಹಣತೆಗಳ ಹೊಂಬೆಳಕಿನ ಭವ್ಯ ದರ್ಶನಕ್ಕೆ ದೀಪ ಬೆಳಗುವ ಮೂಲಕ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದಂಪತಿ ವಿಧ್ಯುಕ್ತವಾದ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಣೇಶ ಮೂರ್ತಿ ನಾವಡ ದಂಪತಿ, ಕಾರ್ಯದರ್ಶಿ ಲಕ್ಷಿ÷್ಮÃನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ, ಆಡಳಿತ ಮಂಡಳಿಯ ಬೆಂಗಳೂರಿನ ಸದಸ್ಯ ಪ್ರತಿನಿಧಿ ಎ.ವಿ.ಶ್ರೀಧರ ಕಾರಂತ, ಇಂದ್ರಪ್ರಸ್ಥ ಪ್ರಕಾಶ ಮಯ್ಯ ದಂಪತಿ,ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ,ಕೋಶಾಧಿಕಾರಿ ಗೋಪಾಲಕೃಷ್ಣ ಮಯ್ಯ, ಇಂದ್ರಪ್ರಸ್ಥ ಪ್ರಕಾಶ ಮಯ್ಯ ದಂಪತಿ, ಕಿರಿಮಂಜೇಶ್ವರ ,ಉಡುಪಿ, ಸಾಲಿಗ್ರಾಮ ,ಮಂಗಳೂರು ಮುಂತಾದ ವಿವಿಧ ಅಂಗಸAಸ್ಥೆಯ ಪದಾಧಿಕಾರಿಗಳು, ಗ್ರಾಮ ಮೊಕ್ತೇಸರ ಪ್ರತಿನಿಧಿಗಳು, ಅರ್ಚಕ ವರ್ಗ, ಸಿಬ್ಬಂದಿ ವರ್ಗ,ಮತ್ತು ಊರ ಪರವೂರ ಸಹಸ್ರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಸಾಲಿಗ್ರಾಮ ಬ್ರಾಹ್ಮಣ ಮಹಾಸಭೆಯವರಿಂದ ವಿಶೇಷ ಭಜನಾ ಕಾರ್ಯಕ್ರಮವು ನಡೆಯಿತು. ಹಣತೆಯ ಬೆಳಕಲ್ಲಿ ಜಗದೊಡೆಯ ನರಸಿಂಹ, ಮಹಾ ಗಣಪತಿ , ದುರ್ಗಾಪರಮೇಶ್ವರಿ ಮತ್ತು ಆಂಜನೇಯ ದೇವರುಗಳನ್ನು ಕಣ್ತುಂಬ ನೋಡಿ ಬಾವ ಪರವಶರಾದ ಭಕ್ತರಿಗೆ ಮಹಾಮಂಗಳಾರತಿಯ ನಂತರ ಪನಿವಾರ ನೀಡಲಾಯಿತು.

 

Related Articles

error: Content is protected !!