ಕೋಟ : ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿ ಮಾರ್ಚ್ ೪ರಿಂದ ಆರಂಭಗೊAಡ ಲಕ್ಷಮೋದಕ ಗಣಯಾಗದ ಪೂರ್ಣಾಹುತಿಯು ಶನಿವಾರರಂದು ಸಂಪನ್ನಗೊAಡಿತು.
ಲಕ್ಷಮೋದಕ ಗಣಯಾಗದೊಂದಿಗೆ ಸಂಜೆ 04ರಿಂದ ಶ್ರೀಗುರುಧಾಮದಲ್ಲಿ ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೆಘ್ನ ಹೋಮ, ಸುದರ್ಶನ ಹೋಮ,ದಿಗ್ಬಲಿ ಕಾರ್ಯಕ್ರಮಗಳು ದೇಗುಲದ ತಂತ್ರಿಗಳಾದ ವೇ.ಮೂ ಕೃಷ್ಣ ಸೋಮಯಾಜಿ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೆರಿತು.
ಧಾರ್ಮಿಕ ಕೈಂಕರ್ಯದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ದಂಪತಿಗಳು ಭಾಗಿಯಾದರು.
ದೇಗುಲದಲ್ಲಿ ವಿಶೇಷವಾಗಿ ಭಕ್ತರು ಗಣಯಾಗದಲ್ಲಿ ಭಾಗಿಯಾಗಿ ಅನ್ನ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಪಿ.ಲಕ್ಷ್ಮೀ ನಾರಾಯಣ ತುಂಗ,ಉಪಾಧ್ಯಕ್ಷರಾದ ವೇ.ಮೂ. ಗಣೇಶಮೂರ್ತಿ ನಾವಡ, ಕುಡಿನಲ್ಲಿ,ಕೋಶಧಿಕಾರಿ ವೇ.ಮೂ. ಪರಶುರಾಮ ಭಟ್ಟ, ಎಡಬೆಟ್ಟು,ಸದಸ್ಯರಾದ ಎ.ವಿ. ಶ್ರೀಧರ ಕಾರಂತ, ಬೆಂಗಳೂರು,ಕೆ. ಅನಂತಪದ್ಮನಾಭ ಐತಾಳ, ಕೋಟ,ವೇ.ಮೂ. ಜಿ. ಚಂದ್ರಶೇಖರ ಉಪಾಧ್ಯ, ಗುಂಡ್ಮಿ,ಪಿ. ಸದಾಶಿವ ಐತಾಳ, ಕೃಷ್ಣಾಪುರ, ಮಂಗಳೂರು,ಆರ್. ಎಂ. ಶ್ರೀಧರ ರಾವ್ ಮೀಯಪದವು, ಕೇರಳ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ,ಕೂಟ ಮಹಾಜಗತ್ತು ಅಂಗಸಂಸ್ಥೆ ಅಧ್ಯಕ್ಷ ಪಿ.ಸಿ ಹೊಳ್ಳ,ಅಂಗಸಂಸ್ಥೆಯ ಕಾರ್ಯದರ್ಶಿ ಮಹಾಬಲ ಹೇರ್ಳೆ, ಮಾಜಿ ಅಧ್ಯಕ್ಷ ಶ್ರೀಪತಿ ಅಧಿಕಾರಿ,ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಕೆ.ತಾರಾನಾಥ ಹೊಳ್ಳ,ದೇಗುಲದ ಮಾಜಿ ಅಧ್ಯಕ್ಷ ಜಗದೀಶ ಕಾರಂತ,ಮಾಜಿ ಸದಸ್ಯ ಕೃಷ್ಣ ಹೆಬ್ಬಾರ್,ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋಧ ಹೊಳ್ಳ,ಹಾಗೂ ತಂತ್ರಿಗಳು, ಜೋಯಿಸರು, ಪವಿತ್ರಪಾಣಿ, ಅರ್ಚಕರು,ಉಪಾಧಿವಂತರು, ಗ್ರಾಮ ಮೋಕ್ತೇಸರರು ಉಪಸ್ಥಿತರಿದ್ದರು.

