Home » ರೋಟರಾಕ್ಟ್ ಕ್ಲಬ್‌ನಿಂದ ಆನಗಳ್ಳಿ ಶಾಲೆಯಲ್ಲಿ ವಿಸ್ತರಣಾ ಚಟುವಟಿಕೆ
 

ರೋಟರಾಕ್ಟ್ ಕ್ಲಬ್‌ನಿಂದ ಆನಗಳ್ಳಿ ಶಾಲೆಯಲ್ಲಿ ವಿಸ್ತರಣಾ ಚಟುವಟಿಕೆ

by Kundapur Xpress
Spread the love

ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ಇಲ್ಲಿನ ರೋಟರಾಕ್ಟ್ ಕ್ಲಬ್‌ನ ಆಶ್ರಯದಲ್ಲಿ ಮಾರ್ಚ್ 5, 2025ರಂದು ಕುಂದಾಪುರ ತಾಲೂಕಿನ ಆನಗಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು (Outreach Activity) ಆಯೋಜಿಸಲಾಯಿತು.
ರೋಟರಾಕ್ಟ್ ಕ್ಲಬ್‌ನ ಸ್ವಯಂಸೇವಕರು ಆರೋಗ್ಯಕರ ಆಹಾರ ಅಭ್ಯಾಸಗಳ ಮಹತ್ವ, ತಂತ್ರಜ್ಞಾನದ ಸರಿಯಾದ ಬಳಕೆ, ಸ್ವಚ್ಛತೆ ಮತ್ತು ಹೈಜೀನ್ ಹಾಗೂ ರಸ್ತೆ ಸುರಕ್ಷತೆ ಕುರಿತಂತೆ ಬೋಧನೋಪಕರಣಗಳ ಸಹಾಯದಿಂದ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ನೈತಿಕತೆ ಮತ್ತು ಮೌಲ್ಯಗಳ ಕುರಿತು ಪ್ರೇರಣೆ ನೀಡಲಾಯಿತು.
ಹಲವು ಸಾಂಪ್ರದಾಯಿಕ ಆಟಗಳನ್ನು ನಡೆಸಲಾಯಿತು. ಸ್ವಯಂಸೇವಕರು ಮಕ್ಕಳಿಗೆ ನೋಟು ಪುಸ್ತಕ, ಪೆನ್ನು, ಹಣ್ಣುಗಳನ್ನು ವಿತರಿಸಿದರು. ಇದೇ ಸಂದರ್ಭ ಶಾಲೆಗೆ ಗೋಡೆಯ ಗಡಿಯಾರವನ್ನು ನೀಡಲಾಯಿತು. ಈ ಸೇವಾ ಕಾರ್ಯಕ್ರಮದ ಮೂಲಕ ಸ್ವಯಂಸೇವಕರು ಸೇವೆ ಸಲ್ಲಿಸುವ ಸಂಸ್ಕೃತಿ, ಆರೈಕೆ ಮತ್ತು ಹಂಚಿಕೊಳ್ಳುವ ಮಹತ್ವವನ್ನು ತಿಳಿಯುವ ಅವಕಾಶವನ್ನು ಪಡೆದರು.
ಈ ಸಂದರ್ಭದಲ್ಲಿ ಕಾಲೇಜಿನ ರೋಟರಾಕ್ಟ್ ಕ್ಲಬ್‌ನ ಸಂಯೋಜಕರುಗಳಾದ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು ಮತ್ತು ಶ್ರೀಮತಿ ಅವಿತಾ ಕೊರೆಯಾ ಉಪಸ್ಥಿತರಿದ್ದರು.

 

Related Articles

error: Content is protected !!