ಕುಂದಾಪುರ : ರಾಮಕ್ಷತ್ರಿಯ ಯುವಕ ಮಂಡಳಿಯ 58ನೇ ವರ್ಷದ ಗಣೇಶೋತ್ಸವ ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ರಾಮಕ್ಷತ್ರಿಯ ಸಮಾಜದ ಡಾ.ಲಕ್ಷ್ಮೀನಾರಾಯಣ ಬಿಜೂರು ರವರನ್ನು ಸನ್ಮಾನಿಸಲಾಯಿತು
ಬೈಂದೂರಿನ ಬಿಜೂರು ನಿವಾಸಿಯಾದ ಜನಾರ್ಧನ್ ನಾಯಕ್ ಹಾಗೂ ಶ್ರೀಮತಿ ಶಶಿಕಲಾ ದಂಪತಿಯ ಸುಪುತ್ರರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಪ್ಪುಂದದಲ್ಲಿ ಪಡೆದು ಪ್ರೌಢ ಶಿಕ್ಷಣ ಮತ್ತು ಪಿಯುಸಿ ಶಿಕ್ಷಣವನ್ನು ಬೆಂಗಳೂರಿನ ಬಾಪು ವಿದ್ಯಾಸಂಸ್ಥೆಯಲ್ಲಿ ಪೂರೈಸಿದರು
2016 ರಲ್ಲಿ ಬೆಂಗಳೂರಿನ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ ಸ್ಟೀಟ್ಯೂಟ್ ನಿಂದ ವೈದ್ಯಕೀಯ ಪದವಿ (MBBS) ಪಡೆದು ಬೆಂಗಳೂರಿನ ಇಂದಿರಾಗಾಂಧಿ ಇನ್ ಸ್ಟೀಟ್ಯೂಷನ್ ಆಫ್ ಚೈಲ್ಡ್ ಹೆಲ್ತ್ ವೈದ್ಯಕೀಯ ಸಂಸ್ಥೆಯಿಂದ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು (M D) ಪಡೆದಿದ್ದಾರೆ 2022 ರಲ್ಲಿ ನವದೆಹಲಿಯ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ರವರಿಂದ ಡಿ ಎನ್ ಬಿ (D N B) ಪದವಿಯನ್ನು ಪಡೆದು ಸಾಧಕರೇನಿಸಿಕೊಂಡಿದ್ದಾರೆ
ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಶಿಶು ಮತ್ತು ಮಕ್ಕಳ ವೈದ್ಯಕೀಯ ವಿಭಾಗದ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕುಂದಾಪುರದ ಪ್ರಸಿದ್ಧ ಚಿನ್ಮಯಿ ಆಸ್ಪತ್ರೆಯಲ್ಲಿ ಶಿಶು ಮತ್ತು ಮಕ್ಕಳ ವೈದ್ಯಕೀಯ ವಿಭಾಗದ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ತನ್ನ ಹುಟ್ಟುರಾದ ಬೈಂದೂರಿನಲ್ಲಿಯೂ ಕ್ಲಿನಿಕನ್ನು ತೆರೆದು ಸೇವೆ ಸಲ್ಲಿಸುತ್ತಿದ್ದಾರೆ
ಶೈಕ್ಷಣಿಕ ಕ್ಷೇತ್ರದ ಸಾಧನೆ ಹಾಗೂ ವೈದ್ಯಕೀಯ ಸೇವಾ ಅನುಭವದ ಸಾಧಕರಾಗಿದ್ದರೂ ಕೂಡ ತಮ್ಮ ಸ್ನೇಹಮಯ ಹಾಗೂ ಸೌಮ್ಯ ಸ್ವಭಾವದ ಡಾ.ಲಕ್ಷ್ಮೀನಾರಾಯಣ ಬಿಜೂರು ಇವರನ್ನು ರಾಮಕ್ಷತ್ರಿಯ ಯುವಕ ಮಂಡಳಿಯ ಸರ್ವ ಸದಸ್ಯರ ಪ್ರೀತಿಪೂರ್ವಕ ಅಭಿಮಾನದೊಂದಿಗೆ ಸನ್ಮಾನಿಸಲಾಯಿತು