ಅಪರಾಧಿ ನಾನಲ್ಲ…ಅಪರಾಧ ಎನಗಿಲ್ಲ….
ಕಳೆದೆರಡು ದಿನಗಳಿಂದ ಸುಮಾರು ಸ್ಟೇಟಸ್ಗಳನ್ನು ನೋಡುತ್ತಿದ್ದೇನೆ, ಕಮೆಂಟ್ಗಳನ್ನು ಓದುತ್ತಿದ್ದೇನೆ. ಎಲ್ಲರೂ ನಳಿನ್ ಕುಮಾರ್ ಕಟೀಲ್ ಹಾಗೂ ಸಂತೋಷ್ ಜೀ ಮೇಲೆ ಎಗರಿ ಬಿದ್ದಿದ್ದಾರೆ. ನಳಿನ್ ಕುಮಾರ್ ಅವರನ್ನು ಜನರು ಪ್ರಶ್ನೆ ಮಾಡಬೇಕಾದ್ದೇ ಯಾಕೆಂದರೆ, ಅವರು ರಾಜ್ಯಾಧ್ಯಕ್ಷರು. ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದ್ದರೂ ಒಕೆ.ಅದೆಲ್ಲವನ್ನೂ ಬಿಟ್ಟು ಸಂತೋಷ್ ಜೀಯವರನ್ನು ಎಳೆದು ತರುತ್ತಿರುವುದೇ ಅರ್ಥವಾಗದ ಸಂಗತಿ.
ನಳಿನ್ ಹಾಗೂ ಬೊಮ್ಮಾಯಿಯವರಾದ್ರೂ ರಾಜಕಾರಣಿಗಳು ಅವರಿಗೆ ಅಧಿಕಾರ ಬೇಕು ಎಂದುಕೊಳ್ಳೋಣ. ಆದರೆ ಸಂತೋಷ್ ಜೀಗೆ ರಾಜ್ಯದಲ್ಲಿ ಬಿಜೆಪಿ ಬಂದರೂ, ಬರದಿದ್ದರೂ ವೈಯಕ್ತಿಕವಾಗಿ ಲಾಭ ಅಥವಾ ನಷ್ಟ ಏನಿದೆ?
ಈ ಸಲ ಬಿಜೆಪಿ ಸೋತಿದ್ದೇ ಎಷ್ಟೋ ನಾಯಕರ ಅತಿಯಾದ ಆತ್ಮವಿಶ್ವಾಸ,ಅಹಂಕಾರದಿಂದ ಹಾಗೂ ಸ್ವಯಂಕೃತ ಅಪರಾಧದಿಂದ ಅದೆಲ್ಲದರ ಜತೆಗೆ ಧರ್ಮದ ಪರವಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಕಷ್ಟ ಬಂದಾಗ ನಾಯಕರ ಮನೆ ಮುಂದೆ ಹೋಗಿ ನಿಂತ ಎಷ್ಟೋ ಹಿಂದೂಗಳಿಗೆ ಕ್ಯಾರೇ ಎನ್ನದ ನಾಯಕರಿಂದ. ಹಿಂದೂಗಳು ಮತ ಹಾಕಲ್ಲ ಅಂತ ನಿರ್ಧಾರ ಮಾಡಿದ್ದೇ ಮಾಡಿದ್ದು ಮುಸ್ಲಿಮರೆಲ್ಲರೂ ಒಂದು ಹೊತ್ತಿನ ಊಟ ಬೇಕಾದ್ರೂ ಬಿಡ್ತೀನಿ, ವೋಟ್ ಹಾಕೋದ್ ಬಿಡಲ್ಲ ಎಂದು ಕಾಂಗ್ರೆಸ್ಸಿಗೆ ಮತ ಹಾಕಿದರು.
ಅದ್ಯಾವನೋ ಒಬ್ಬ “ಹಿಂದೂಗಳ ಹೆಣ ಎತ್ತಕ್ಕೂ ಜನ ಇರಬಾರದು ಹಾಗ್ ಮಾಡ್ತೀವಿ” ಅಂತ ಹೇಳಿದ್ದ ಕಮೆಂಟ್,ಬೆಳಗಾವಿಯಲ್ಲಿ “ಪಾಕಿಸ್ಥಾನ್ ಜಿಂದಾಬಾದ್” ಶಿರಸಿಯ ಮಾರಿಕಾಂಬ ದೇವಸ್ಥಾನದ ಮುಂದೆ “ಇಸ್ಲಾಮಿಕ್” ಧ್ವಜಗಳು, ಆಡಿಯೋ ಮೆಸೇಜ್ ಒಂದರಲ್ಲಿ ಯಾವನೋ “ಶಿರಸಿ ನಮ್ಮದೇಯ.. ಇನ್ನು ಅಪ್ಪೆಹುಳಿಯವರು(ಬ್ರಾಹ್ಮಣರು) ಪಂಕ್ಚರ್” ಎಂದಿದ್ದು. ಮಡಿಕೇರಿಯ ಗಲಾಟೆಯ ವಿಡಿಯೊ ಎಲ್ಲವೂ ಹಿಂದೂಗಳು ಹೊರಗೆ ಬಂದು ಮತ ಹಾಕದಿದ್ದಕ್ಕೆ ಹಾಗೂ ನಾಯಕರ ದುರಹಂಕಾರಕ್ಕೆ ಆಗಿದ್ದು. ಮತದಾರರು ನಮಗೆ ಸಪೋರ್ಟ್ ಮಾಡ್ತಾರೆ ಎಂಬ ಅಹಂಕಾರ ಇವರದ್ದಾದರೆ, ಈ ಅಹಂಕಾರವನ್ನೇ ಮುರಿಯಬೇಕು ನಾವು ಎಂದು ಹೊರಟಿದ್ದು ಹಿಂದೂಗಳು, ಗೆದ್ದಿದ್ದು ಕಾಂಗ್ರೆಸ್, ಮುಸ್ಲಿಮರ ಓಲೈಕೆ ಎಂಬುದು ಕಾಂಗ್ರೆಸ್ನ ಪರಮ ಅಜೆಂಡಾ.
ಕಾಂಗ್ರೆಸ್ ಈ ಬಾರಿ ಉಚಿತ ಕೊಡುಗೆಗಳನ್ನು ಕೊಡುವ ಭರವಸೆ ಮುಸ್ಲಿಮರು – ಹಿಂದೂಗಳು ಕಾಂಗ್ರೆಸ್ಗೆ ಮತ ಹಾಕುವಂತೆ ಮಾಡಿತು ಅದರಲ್ಲೂ ಹೆಚ್ಚಾಗಿ, ಜೆಡಿಎಸ್ಗೆ ಮತ ಹಾಕುವ ಮುಸ್ಲಿಮರು, ಹಿಂದೂಗಳೆಲ್ಲ ಕಾಂಗ್ರೆಸ್ಗೆ ಹಾಕಿದರು. ಇನ್ನು ಬಿಜೆಪಿಯಿಂದ ಬೇಸತ್ತ ಹಿಂದೂಗಳೂ 1%ನಷ್ಟು ಜನ ಕಾಂಗ್ರೆಸ್ಗೆ ಮತ ಹಾಕಿದರು. ಮುಸ್ಲಿಮರಂತೂ ಕಳೆದ ಬಾರಿಯಂತೆ ಜೆಡಿಎಸ್, ಎಐಎಂಐಎಂ, ಎಸ್ಡಿಪಿಐ ನಂಥ ಪಕ್ಷಗಳಿಗೆ ಮತ ಹಾಕಿ ವೇಸ್ಟ್ ಮಾಡದೇ, ಬಿಜೆಪಿಯನ್ನು ಸೋಲಿಸುವ ಒಂದೇ ಗುರಿಯೊಂದಿಗೆ ಕಾಂಗ್ರೇಸ್ ಪಕ್ಷಕ್ಕೆ ಮುಗಿಬಿದ್ದು ವೋಟ್ ಮಾಡಿದರು.
ಬಿಟ್ಟಿ ಭಾಗ್ಯಗಳಿಗೆ ಬಿದ್ದವರ್ಯಾರು? ಮತ ಹಾಕದೇ ಮನೆಯಲ್ಲೇ ಉಳಿದವರ್ಯಾರು? ಹಿಂದೂಗಳು. ಬಿಜೆಪಿಯ ನಾಯಕರಿಗೆ ಬುದ್ಧಿ ಕಲಿಸುತ್ತೇನೆ ಎಂದು ಹೋದವರ್ಯಾರು? ಹಿಂದೂಗಳು. ಇನ್ನು ಐದು ವರ್ಷ ಜೀವನ ಮಾಡಬೇಕಾದವರು ಯಾರು? ಮತ್ತದೇ ಹಿಂದೂಗಳು. ಇದಕ್ಕೆ ಸಂತೋಷ್ ಜೀ ಏನ್ ಮಾಡಬೇಕು ಹೇಳಿ? ಪಾಠ ಕಲಿಸಲು ಹೋಗಿ ತಾವೇ ಪಠ್ಯಪುಸ್ತಕ ಸೇರೋದನ್ನು ಹಿಂದೂಗಳನ್ನು ನೋಡಿ ಕಲಿಯಬೇಕಿದೆ.
ಒಡೆದ ಮನಸ್ಸುಗಳನ್ನು ಸರಿ ಮಾಡಲಿಕ್ಕೆ ಹೊರಟಿದ್ದು ಸಂತೋಷ್ ಜೀ. ಕಾರ್ಯಕರ್ತರಿಗೆ ಸಮಸ್ಯೆಯಾದಾಗಲೂ ನಾಯಕರಿಗಿಂತ ಮುಂಚೆ ಕಾಲ್ ರಿಸೀವ್ ಮಾಡಿದ್ದು ಸಂತೋಷ್ ಜೀ.ಕಾರ್ಯಕರ್ತರ ಸೇಫ್ಟಿ ನಾಯಕರಿಗಿಂತ ಹೆಚ್ಚು ಮುಖ್ಯವಾಗಿದ್ದಿದ್ದು ಸಂತೋಷ್ ಜೀ ಹೀಗೆ ಅವರನ್ನ ಕಮೆಂಟು, ಪೋಸ್ಟ್ಗಳಲ್ಲಿ ಎಳೆಯುತ್ತಿರುವುದು ಮೂರ್ಖತನದ ಪರಮಾವಧಿಯೇ ಸರಿ
ಬಿಜೆಪಿಯನ್ನು ಸೋಲಿಸುವ ಒಂದೇ ಒಂದು ಪಕ್ಷಕ್ಕೆ ವೋಟ್ ಮಾಡುತ್ತೇವೆ ಎಂಬ ಮುಸ್ಲಿಮರಿಗೆ ಇರುವ ತಲೆ, ಹಿಂದೂಗಳಿಗೆ ಬರದೇ ಹೋಯಿತಲ್ಲ ಎಂಬುದೇ ವಿಪರ್ಯಾಸ