Home » ಬಾಳ್ಕುದ್ರು : ಸರ್ವೋದಯ ಯುವಕ ಮಂಡಲ : ಸ್ವಾತಂತ್ರ್ಯ ದಿನಾಚರಣೆ
 

ಬಾಳ್ಕುದ್ರು : ಸರ್ವೋದಯ ಯುವಕ ಮಂಡಲ : ಸ್ವಾತಂತ್ರ್ಯ ದಿನಾಚರಣೆ

by Kundapur Xpress
Spread the love

ಕೋಟ : ಇಲ್ಲಿನ ಬಾಳ್ಕುದ್ರು ಸರ್ವೋದಯ ಯುವಕ ಮಂಡಲದ ವಠಾರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಯಿತು. ಧ್ವಜಾರೋಹಣವನ್ನು ಉದ್ಯಮಿ ಹರ್ಷೇಂದ್ರ ಶೆಟ್ಟಿ ನೆರವೇರಿಸಿ ಸ್ವಾತಂತ್ರ್ಯ  ದಿನಾಚರಣೆಯ ಕುರಿತು ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ವಿಜೇತ್ ದೇವಾಡಿಗ, ಮಹಿಳಾ ಮಂಡಳದ ಅಧ್ಯಕ್ಷೆ ರೇಖಾ ಪಿ ಸುವರ್ಣ, ಬಿಲ್ಲವ ಸಂಘದ ಅಧ್ಯಕ್ಷ ವಿಜಯ್ ಪೂಜಾರಿ ಹಾಗೂ ಊರಿನ ಹಿರಿಯರಾದ ಅನುಸೂಯಾ ಟೀಚರ್ ಉಪಸ್ಥಿತರಿದ್ದರು.

ನಂತರ ಸ್ವಾತಂತ್ರ್ಯ ದಿನಾಚರಣೆಯ ಹಂಗಾರಕಟ್ಟೆ ಅಂಗನವಾಡಿಗೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳ್ಕುದ್ರು ವಿದ್ಯಾರ್ಥಿಗಳಿಗೆ ಸರ್ವೋದಯ ಯುವಕ ಮಂಡಲದ ವತಿಯಿಂದ ಸಿಹಿಯನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಕಾರ್ತಿಕ್ ಹಂಗಾರಕಟ್ಟೆ ಅವರು ನಿರೂಪಿಸಿ ರಾಮ ದಂಡಬೆಟ್ಟುರವರು ವಂದಿಸಿದರು

 

Related Articles

error: Content is protected !!