ಕುಂದಾಪುರ : ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಉರಿಯದ ದೀಪ, ಹೊಂಡ ಗುಂಡಿಗಳಿಂದ ವಾಹನ ಸವಾರರಿಗೆ ಪಾದಚಾರಿ ಸಮಸ್ಯೆ, ಸ್ಥಳೀಯ ಸಂಘ ಸಂಸ್ಥೆ ಸೇರಿದಂತೆ ಇತರ ವಾಹನಗಳಿಗೆ ವಿಧಿಸುತ್ತಿರುವ ಸುಂಕ. ಇವೆಲ್ಲವನ್ನೂ ಖಂಡಿಸಿ ಶನಿವಾರ ಸಾಸ್ತಾನ ಟೋಲ್‌ಗೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾ.ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಸಂಸ್ಥೆಗಳ ಹೆಸರಿನಲ್ಲಿ ನೋಂದಾವಣೆ ಆಗಿರುವ ವಾಹನಗಳಿಗೆ ಟೋಲ್ ಸುಂಕ ವಸೂಲಾತಿ ನಡೆಯುತ್ತಿದೆ. ಹಲವು ಬಾರಿ ಸ್ಥಳಿಯ ಶಾಲಾ ವಾಹನಗಳು ಟೋಲ್ ನಲ್ಲಿ ಸಮಯ ವ್ಯರ್ಥಗೊಳಿಸುತ್ತಿದ್ದಾರೆ ಇದರಿಂದ ಶಾಲಾ ಮಕ್ಕಳಿಗೆ ಮಾನಸಿಕವಾಗಿ ಸಾಕಷ್ಟು ಹಿಂಸೆಯಾಗುತ್ತದೆ
ಹಂತ ಹಂತವಾಗಿ ಟೋಲ್ ಸಂಗ್ರಹಣೆ ಆರಂಭಿಸುವುದು ಅವರ ಗುರಿಯಾಗಿದೆ. ಇಷ್ಟಲ್ಲದೆ ಸಾಸ್ತಾನದಿಂದ ಕುಂದಾಪುರಕ್ಕೆ ತೆರಳುವ ಮಾರ್ಗವೆನ್ನವುದು ಹೊಂಡಮಯವಾಗಿದೆ. ಪಾದಾಚಾರಿ ಮಾರ್ಗಗಳಲ್ಲಿ ಬೃಹತ್ ಹೊಂಡಗಳಿಂದ ಸಾವು ನೋವು ಸಂಭವಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ. ಇದು ಕಂಪನಿ ಸರ್ಕಾರವಲ್ಲ ಪ್ರಜಾಪ್ರಭುತ್ವ ಎನ್ನುವುದು ನೆನಪಿರಲಿ ಎಂದು ಆಕ್ರೋಶ ಹೊರಹಾಕಿದರು
ಟೋಲ್ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಬ್ರಹಾವರ ಸರ್ಕಲ್ ದಿವಾಕರ್ ಮಧ್ಯಸ್ಥಿಕೆ ವಹಿಸಿ ಟೋಲ್ ಕಂಪೆನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ತಿಳಿಗೊಳಿಸಿದರು.