ಕೋಟ : ಇಲ್ಲಿನ ಸಾಸ್ತಾನ ಟೋಲ್ ನಲ್ಲಿ ದಿಢೀರ್ ಪ್ರತಿಭಟನೆ ನಡೆದ ಘಟನೆ ಶುಕ್ರವಾರ ನಡೆಯಿತು.
ಗುರುವಾರ ರಾತ್ರಿಯಿಂದಲೇ ಕಮರ್ಷಿಯಲ್ ವಾಹನ (ಹಳದಿ ನಂಬರ್ ಪ್ಲೇಟ್ ) ಹೊಂದಿದ ಸ್ಥಳೀಯ ವಾಹನಗಳಿಗೆ ದಿಢೀರ್ ಟೋಲ್ ವಸೂಲಾತಿಯ ಹಿನ್ನಲ್ಲೆಯಲ್ಲಿ ಶುಕ್ರವಾರ ಅಪರಾಹ್ನದಿಂದ ಟೋಲ್ ಬಳಿಬಾರಿ ಸಂಖ್ಯೆಯಲ್ಲಿ ಸ್ಥಳೀಯ ವಾಹನಗಳು ಟೋಲ್ ಪ್ಲಾಜಾಕ್ಕೆ ಅಡ್ಡ ಇಡಿಸಿ ಪ್ರತಿಭಟನೆ ನಡೆಸಿದವು.
ಸ್ಥಳಕ್ಕೆ ದೌಡಾಯಿಸಿದ ಬ್ರಹ್ಮಾವರ ಸರ್ಕಲ್ ದಿವಾಕರ್ ಸ್ಥಳೀಯ ವಾಹನದಾರರ ಮನವೊಲಿಸಲು ಪ್ರಯತ್ನಿಸಿದರು.
ಇದಕ್ಕೆ ಬಗ್ಗದ ವಾಹನ ಮಾಲಿಕರು ಘೋಷಣೆಗಳನ್ನು ಕೂಗಿ ಟೋಲ್ ಗೇಟ್ ಬಂದ್ ಮಾಡಲು ಪ್ರಯತ್ನಿಸಿದರು.ಈ ನಡುವೆ ಪೋಲಿಸ್ ಹಾಗೂ ವಾಹನ ಚಾಲಕರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು.
ಈ ಹಿನ್ನಲ್ಲೆಯಲ್ಲಿ ಸಭೆ ನಡೆಸಿದ ಟೋಲ್ ಕಂಪನಿಗಳ ಪ್ರಮುಖರು ವಿನಾಯಿತಿ ನೀಡಲು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ವಾಹನದಾರರು ಸ್ಥಳದಲ್ಲೆ ಟಿಕಾಣಿ ಹೂಡಿ ಎರಡು ಭಾಗಗಳ ಕೊನೆಯ ಗೇಟ್ ಬಂದ್ ಮಾಡಿ ಪ್ರತಿಭಟಿಸಿದರು.
ಈ ವೇಳೆ ಪೋನ್ ಮೂಲಕ ಮಧ್ಯಪ್ರವೇಶಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶನಿವಾರದವರೆಗೆ ಯಥಾಸ್ಥಿತಿ ಕಾಪಾಡಲು ಟೋಲ್ ಕಂಪನಿಯ ಮುಖ್ಯಸ್ಥರಿಗೆ ಸೂಚಿಸಿ ಸಮಸ್ಯೆ ಬಗೆರಿಸುವ ಕುರಿತು ತಮ್ಮನ್ನು ಭೇಟಿಯಾಗಲು ಹೋರಾಟಗಾರರ ನೇತೃತ್ವದ ವಹಿಸಿದ ಭೋಜ ಪೂಜಾರಿಯವರಿಗೆ ಮಾಹಿತಿ ನೀಡಿದ್ದಾರೆ.
ಪ್ರತಿಭಾರಿ ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಸಾಕಷ್ಟು ಭಾರಿವಪ್ರತಿಭಟನೆ ನಡೆಸಿ ಯಶಸ್ವಿಯಾಗಿದೆ.ಆದರೆ ಪ್ರಸ್ತುತ ಟೋಲ್ ಉಸ್ತುವಾರಿ ಇಂಗ್ಲೆಂಡ್ ಮೂಲದ ಕೆ.ಕೆ ಆರ್ ಕಂಪನಿ ಮತ್ತದೆ ಟೋಲ್ ಕಿರಿಕಿರಿಯುಂಟು ಮಾಡುತ್ತಿದೆ.
ಕೋಟ ಜಿ.ಪಂ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ಟೋಲ್ ವಿನಾಯಿತಿ ನೀಡಿದ ನವಯುಗ ಕಂಪನಿಯ ವಿರುದ್ಧ ದಿಕ್ಕಿನಲ್ಲಿ ಕೆ.ಕೆ ಆರ್ ಕಂಪನಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಈ ಹಿನ್ನಲ್ಲೆಯಲ್ಲಿ ಇತ್ತೀಚಿಗೆ ಟೋಲ್ ವಿನಾಯಿತಿ ಹಾಗೂ ದಾರಿದೀಪ,ಅಸಮರ್ಪಕ ರಸ್ತೆ,ಅವ್ಯವಸ್ಥಿತ ಚರಂಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇರಿಸಿ ಸಾಲಿಗ್ರಾಮದ ಚಿತ್ರಪಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು.ಇದಾದ ನಂತರ ಈ ರೀತಿಯ ಟೋಲ್ ಕಿರಿಕಿರಿ ಸಮಸ್ಯೆ ಸೃಷ್ಟಿ ಸುತ್ತಿರುವುದಕ್ಕೆ ವಾಹನ ಸವಾರರು ,ಹೆದ್ಸಾರಿ ಜಾಗೃತಿ ಸಮಿತಿ ತೀವ್ರ ಆಕ್ರೋಶ ಹೊರಹಾಕಿದೆ.
ದಿನಕ್ಕೆ ಹತ್ತಾರು ಬಾರಿ ಟೋಲ್ ಮೂಲಕ ಸಂಚರಿಸುವ ಸ್ಥಳೀಯ ಎಲ್ಲೊ ಬೋಡ್೯ ವಾಹನಗಳಿಗೆ ದಿಢೀರ್ ಟೋಲ್ ವಸೂಲಾತಿ ಸಲ್ಲ ಬದಲಾಗಿ ವಿನಾಯಿತಿ ನೀಡಲೇಬೇಕು ,ಪದೆ ಪದೆ ಟೋಲ್ ವಸೂಲಾತಿ ಸಮಂಜಸವಲ್ಲ ಈ ಬಗ್ಗೆ ಸಂಬಂಧಿಸಿದ ಇಲಾಖೆ,ಸಂಸದರು ನ್ಯಾಯ ಒದಗಿಸುವ ಬರವಸೆ ಇದೆ
–ಭೋಜ ಪೂಜಾರಿ ಸ್ಥಳೀಯ ವಾಹನ ಹೋರಾಟಗಾರರು