ಕೋಟ : ಇಲ್ಲಿನ ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯ ಕೋಟ ಜಿ.ಪಂ ವ್ಯಾಪ್ತಿಯ ಹಳದಿ ಬೋಡ್೯( ಕಮರ್ಷಿಯಲ್) ವಾಹನಗಳ ಸುಂಕ ವಸೂಲಾತಿಯ ವಿರುದ್ಧ ಶುಕ್ರವಾರ ಹೋರಾಟ ಆರಂಭಗೊAಡಿದ್ದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶಿಸಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಏರ್ಪಡಿಸಿ ತಿರ್ಮಾನ ಕೈಗೊಳ್ಳವ ಭರವಸೆಯನ್ನು ಹಳದಿ ಬೋಡ್೯ ವಾಹನಗಳ ಮಾಲಿಕರಿಗೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಟೋಲ್ ನವರಿಗೆ ಸೂಚಿಸಿದ್ದರು.
ಇದಾದ ಮರುದಿನವೇ ಟೋಲ್ ವಸೂಲಾತಿಗೆ ಕೆ.ಕೆ ಆರ್ ಕಂಪನಿ ಮುಂದಾಗಿದೆ ಈ ಹಿನ್ನಲ್ಲೆಯಲ್ಲಿ ಭಾನುವಾರ ಸ್ಥಳೀಯ ಹಳದಿ ಬೋಡ್೯ ವಾಹನಗಳ ಮಾಲಕ ಮತ್ತು ಚಾಲಕರು, ಹೆದ್ದಾರಿ ಜಾಗೃತಿ ಸಮಿತಿ ಟೋಲ್ ಬಳಿ ಸೇರಿ ಬಾರಿ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ಟೋಲ್ ನಮ್ಮೂರಿನಿಂದ ಕಿತ್ತೋಗೆಯಿರಿ ಎಂಬ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಹೆದ್ದಾರಿ ಜಾಗೃತಿ ಸಮಿತಿ ಸಾಥ್
ಕಳೆದ ಸಾಕಷ್ಟು ವರ್ಷಗಳಿಂದ ಕೋಟ ಜಿ.ಪಂ ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿನಾಯಿತಿ ಹೋರಾಟ ನಡೆಸಿ ಯಶಸ್ವಿಯಾದ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ, ಶುಕ್ರವಾರ ಸ್ಥಳೀಯ ಕಮರ್ಷಿಯಲ್ ವಾಹನಗಳ ಪ್ರತಿಭಟನೆಯಿಂದ ಹೊರಗುಳಿದಿತ್ತು. ಆದರೆ ಸ್ಥಳೀಯ ವಾಹನಗಳಿಗೆ ನ್ಯಾಯ ಒದಗಿಸುವ ದಿಸೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಕಮರ್ಷಿಯಲ್ ವಾಹನಗಳ ಹೋರಾಟಕ್ಕೆ ಸಾಥ್ ನೀಡಿ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ವೇದಿಕೆ ಕಲ್ಪಿಸಿತು
ಸಂಸದ ಕೋಟ ಎದುರಲ್ಲೆ ಪ್ರತಿಭಟನೆ
ಕಮರ್ಷಿಯಲ್ ವಾಹನಗಳ ಹೋರಾಟ ತೀವ್ರಗೊಂಡ ಹಿನ್ನಲ್ಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೋರಾಟಗಾರರೊಂದಿಗೆ ಎರಡು ಗಂಟೆಗೂ ಅಧಿಕ ಜತೆಯಲ್ಲಿದ್ದು ಕೈಜೋಡಿಸಿ ಜಿಲ್ಲಾಧಿಕಾರಿ ಹಾಗೂ ಟೋಲ್ ಕಂಪನಿಯ ಮುಖ್ಯಸ್ಥರನ್ನು ತರಾಟೆ ತೆಗೆದುಕೊಂಡು ಸೋಮವಾರದವರೆಗೆ ಯಥಾಸ್ಥಿತಿ ಟೋಲ್ ವಿನಾತಿ ಮುಂದುವರೆಯಲಿ ನಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹೆದ್ದಾರಿ ಸಮಿತಿ ಹಾಗೂ ಕೆ.ಕೆ.ಆರ್ ಕಂಪನಿ,ವಿವಿಧ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಮುಂದಿನ ತಿರ್ಮಾನ ಕೈಗೊಳ್ಳುವ ಎಂಬ ಸಂಸದರ ಮಾತಿಗೆ ಜಿಲ್ಲಾಧಿಕಾರಿಗಳು ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ ಮೂಲಕ ಮಾಹಿತಿ ನೀಡಿದರು.
ಟೋಲ್‌ಗೇಟ್ ನುಗ್ಗಲು ಯತ್ನ
ಪ್ರತಿಭಟನಾ ಕಾವು ಏರುತ್ತಿದ್ದಂತೆ ಪ್ರತಿಭಟನಾ ನಿರತರು ಟೋಲ್ ಗೇಟ್‌ನ ವಿವಿಧ ಭಾಗಗಳನ್ನು ಬಂದ್ ಮಾಡಲುಯತ್ನಿಸಿದರು.ಪೋಲಿಸ್ ಇಲಾಖೆ ಇದಕ್ಕೆ ಅವಕಾಶ ನೀಡಲಿಲ್ಲ ಬದಲಾಗಿ ಸಂಸದರು, ಇವರುಗಳ ಜತೆ ಸಂವಹನ ನಡೆಸುತ್ತಿರುವಾಗ ಈ ರೀತಿಯ ನಡೆ ಸಲ್ಲ ಎಂಬ ಪೋಲಿಸ್ ಇಲಾಖೆಯ ಮಾತಿಗೆ ಪ್ರತಿಭಟನಾಕಾರರು ಮನ್ನಣೆ ನೀಡಿ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು
ಪದೆ ಪದೆ ಪ್ರತಿಭಟನೆ ನಡೆಸಲ್ಲ ಎಚ್ಚರಿಕೆ..
ಸಾಕಷ್ಟು ಬಾರಿ ಟೋಲ್ ವಿನಾಯಿತಿಗಾಗಿ ಈ ಹಿಂದೆ ಹೋರಾಟ ನಡೆಸಿ ಯಶಸ್ವಿ ಆಗಿದ್ದೇವೆ ಪ್ರಸ್ತುತ ಹೊಸ ಕೆ.ಕೆ ಆರ್ ಕಂಪನಿ ಹೆದ್ದಾರಿ ಸಮಿತಿ ಜತೆ ಚಲ್ಲಾಟ ಆಡುತ್ತಿದೆ ಇದು ಇಲ್ಲಿಗೆ ಕೊನೆಯಾಗಬೇಕು ಇದೇ ರೀತಿ ಮುಂದುವರೆದರೆ ಟೋಲ್ ಈ ಭಾಗದಲ್ಲೆ ಇನ್ನಿಲ್ಲದಂತೆ ಮಾಡುತ್ತೇವೆ.ಇದು ಕೊನೆಯ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ನಮ್ಮ ತಾಳ್ಮೆಗೂ ಮಿತಿ ಇದೆ ಎಂದು ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಎಚ್ಚರಿಸಿದರು.
ಹೆದ್ದಾರಿ ಹೋರಾಟಗಾರರಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ
ಬೆಂಬಲ ನೀಡಿ ಜತೆಯಾದರು. ಹೆದ್ದಾರಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ,ಮಾಜಿ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್,ಸಮಿತಿಯ ಪ್ರಮುಖರಾದ ಅಚ್ಯುತ್ ಪೂಜಾರಿ,ಗಣೇಶ್ ಪೂಜಾರಿ,ಭೋಜ ಪೂಜಾರಿ,ರಾಜೇಶ್ ಸಾಸ್ತಾನ,ದಿನೇಶ್ ಗಾಣಿಗ,ನಾಗರಾಜ್ ಗಾಣಿಗ ಸಾಲಿಗ್ರಾಮ ಇದ್ದರು.ಪೋಲಿಸ್ ಇಲಾಖೆ ಪರವಾಗಿ ಬ್ರಹ್ಮಾವರ ಸರ್ಕಲ್ ದಿವಾಕರ್,ಕೋಟ ಆರಕ್ಷಕ ಠಾಣಾಧಿಕಾರಿ ರಾಘವೇಂದ್ರ ಸಿ ನೇತೃತ್ವದಲ್ಲಿ ಬಿಗಿಬಂದೊಬಸ್ತ ಏರ್ಪಡಿಸಲಾಗಿತ್ತು.