ಕೋಟ : ಕೋಟ ಜಿ.ಪಂ ವ್ಯಾಪ್ತಿಯ ಕಮರ್ಷಿಯಲ್( ಹಳದಿಬೋಡ್೯) ವಾಹನಗಳಿಗೆ ಟೋಲ್ ವಿಧಿಸಿದ ಹಿನ್ನಲೆಯಲ್ಲಿ ಕೆ.ಕೆ ಆರ್ ಕಂಪನಿಯ ವಿರುದ್ಧ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಸೋಮವಾರ ತುರ್ತು ಸಭೆ ಆಯೋಜಿಸಿತು.
ಕಳೆದ ಸಾಕಷ್ಟು ವರ್ಷಗಳಿಂದ ಸ್ಥಳೀಯರಿಗೆ ಟೋಲ್ ವಿನಾಯಿತಿಗೆ ಆಗ್ರಹಿಸಿ ಸಾಕಷ್ಟು ಪ್ರತಿಭಟನೆಗಳನ್ನು ನಡೆಸಿ ಯಶಸ್ವಿಗೊಂಡ ಹೆದ್ದಾರಿ ಜಾಗೃತಿ ಸಮಿತಿಗೆ ಸಡ್ಡು ಹೊಡೆದು ನಿಂತ ಇಂಗ್ಲೆಂಡ್ ಮೂಲದ ಕೆ.ಕೆ ಆರ್ ಕಂಪನಿಗೆ ದೊಡ್ಡ ಮಟ್ಟದ ಪ್ರತಿಭಟನೆಗೆ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ವೇದಿಕೆ ಸಿದ್ಧಪಡಿಸಿದೆ.
ಸಭೆಯಲ್ಲಿ ನಿರ್ಣಯ –
ಸೋಮವಾರ ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದಲ್ಲಿ ಹೆದ್ಸಾರಿ ಜಾಗೃತಿ ಸಮಿತಿ ವಿಶೇಷ ಸಭೆ ನಡೆಸಿದ್ದು ಬಾರಿ ಸಂಖ್ಯೆಯಲ್ಲಿ ಸಾರ್ವಜನಿಕರು,ವಾಹನ ಮಾಲಕ ಚಾಲಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದರು.
ಪದೆ ಪದೆ ಹೋರಾಟದ ಪದ ಸಲ್ಲ ಬದಲಾಗಿ ಇದೇ ಕೊನೆ ಇನ್ನು ಯಾವುದೇ ಕಂಪನಿ ಬರಲಿ ಟೋಲ್ ವಿಚಾರ ಹೊರತೆಗೆಯದಂತೆ ದಂಡ ಪ್ರಯೋಗಿಸಬೇಕು,
ಜನಪರವಾಗಿ ಇರಬೇಕಾದ ಉಡುಪಿ ಜಿಲ್ಲಾಧಿಕಾರಿಗಳ ನಿಲುವು ಖಾಸಗಿ ಕಂಪನಿಗಳ ಪರಕ್ಕೆ ಸಭೆ ಬೇಸರ ವ್ಯಕ್ತಪಡಿಸಿತು.
ಒಂದೊಮ್ಮೆ ಡಿ.30 ರ ಸಭೆಯಲ್ಲಿ ತೀರ್ಪು ನಮ್ಮ ಪರವಾಗಿ ಬಾರದೆ ಇದ್ದರೆ ಡಿ.31ಕ್ಕೆ ಕೋಟ ಜಿ.ಪಂ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಲು ಕರೆ ನೀಡಲು ಸಭೆ ಸರ್ವಾನುಮತದಿಂದ ಆಗ್ರಹಿಸಿ ತಿರ್ಮಾನಿಸಿತು,
60 ಕಿ.ಮಿ ದೂರ ಇರಬೇಕಾದ ಸಾಸ್ತಾನದ ಅನಧಿಕೃತ ಟೋಲ್ ತೆರವುಗೊಳಿಸಲು ಕಾನೂನಾತ್ಮಕ ಕ್ರಮಗಳ ಬಗ್ಗೆ ಸಭೆ ಚರ್ಚಿಸಿತಲ್ಲದೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಸಂಪರ್ಕಿಸುವುದು ಸೇರಿದಂತೆ ಇದೇ 30ರಂದು ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಮ್ಮ ಪರವಾಗಿ ಬಂದರೆ ಪ್ರತಿಭಟನಯಿಂದ ಹಿಂದೆ ಸರಿಯುವುದು ಇಲ್ಲವಾದರೆ ಡಿ.31ರಂದು ಬೃಹತ್ ಪ್ರತಿಭಟನೆಯ ರೂಪುರೇಖೆಗಳ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು.
ಮನೆ ಮನೆಗೆ ತೆರಳಿ ಅನಧಿಕೃತ ಟೋಲ್ ವಸೂಲಾತಿಯ ಬಗ್ಗೆ ಮನವರಿಕೆ ಮಾಡಿ ಕರೆ ತರುವುದು ಸೇರಿದಂತೆ ವಿವಿಧ ಮಾರ್ಗೊಪಾಯಗಳ ಬಗ್ಗೆ ಸಭೆಯಲ್ಲಿ ಅಭಿಪ್ರಾಯಗಳನ್ನು ಕಲೆಹಾಕಿ ನಿರ್ಧಾರ ಕೈಗೊಂಡಿತು.
ಟೋಲ್ ಪ್ಲಾಜಾದಲ್ಲಿ ಬಂದ್ ಆದ ಕ್ಯಾಂಟಿನ್ ಮರಳಿ ತೆರೆಯದಂತೆ ಕ್ರಮಕ್ಕೆ ಸಭೆ ಆಗ್ರಹಿಸಿತು.
ದೊಡ್ಡಮಟ್ಡದ ಪೂರ್ಣಭಾವಿ ಸಭೆ –
ಇದೇ ಕೊನೆಯಂಬAತೆ ಸಾಸ್ತಾನ ಶಿವಕೃಪಾ ಸಭಾಂಗಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು,ವಾಹನ ಚಾಲಕ ಮಾಲಕರು ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ವಿವಿಧ ರೀತಿಯ ಸಲಹೆ ಸೂಚನೆಗಳನ್ನು ನೀಡಿದರು.
ಅಧ್ಯಕ್ಷರಿಂದ ಮಾಹಿತಿ –
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಮಾತನಾಡಿ ಹೆದ್ದಾರಿ ಹೋರಾಟದಲ್ಲೆ ನಮ್ಮ ಸಮಿತಿಯನ್ನು ಅರ್ಪಿಸಿಕೊಂಡಿದ್ದೇವೆ ಇದೀಗ ಉದ್ಭವಿಸಿದ ಸಮಸ್ಯೆಗೆ ನಿಮ್ಮ ಜತೆಯಾಗಲಿದ್ದೇವೆ ನಿವು ಬೃಹತ್ ಸಂಖ್ಯೆಯಲ್ಲಿ ಒಗ್ಗೂಡಿ ನಾವು ಕೆ.ಕೆ ಆರ್ ಕಂಪನಿಯ ಅಟ್ಟಹಾಸಕ್ಕೆ ಮುಕ್ತಿಗಾಣಿಸುವ ಎಂದರು.
ಸಭೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ,ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ,ಲಾರಿ ಮಾಲಕ ಚಾಲಕ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ,ಗೌರವಾಧ್ಯಕ್ಷ ಭೋಜ ಪೂಜಾರಿ,ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಮಾಜಿ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಸ್ವಾಗತಿಸಿ ನಿರೂಪಿಸಿದರು.