Home » ಅಕ್ಷರಗಳಿಂದಲೇ ಜೀವನ : ಶ್ರೀ ಅನಂತ್ ನಾಯಕ್
 

ಅಕ್ಷರಗಳಿಂದಲೇ ಜೀವನ : ಶ್ರೀ ಅನಂತ್ ನಾಯಕ್

by Kundapur Xpress
Spread the love

 ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಒಂದನೇ ತರಗತಿಗೆ ದಾಖಲಾದ ಪುಟಾಣಿಗಳಿಗಾಗಿ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ತೆಕ್ಕಟ್ಟೆಯ ಶ್ರೀ ಅನಂತ್ ನಾಯಕ್ ರವರು ವಹಿಸಿ ಮಾತನಾಡಿದರು

ಅಕ್ಷರಗಳಿಂದಲೇ ಜೀವನ ದ ಮೌಲ್ಯ ನಮಗೆ ಅರಿವಾಗಬೇಕಾದರೆ ಅಕ್ಷರ ಜ್ಞಾನ ಅಗತ್ಯ ಸರಿಯಾದ ಅಕ್ಷರ ಜ್ಞಾನ ಸುಂದರ ಜೀವನವನ್ನ ರೂಪಿಸುವ ಪರ್ವ ಕಾಲ, ಅಕ್ಷರಗಳ ಮೂಲಕ ಅಕ್ಷರಗಳನ್ನು ಪೋಣಿಸಿ ಮಗುವಿನ ಜೀವನಕ್ಕೆ ಸುಂದರ ರೂಪ ನೀಡುವಂತಾಗಲು ಇದುವೇ ವಿಧ್ಯುಕ್ತ ಆರಂಭ ಎಂದರು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು, ಅಕ್ಷರಾಭ್ಯಾಸ ಕಾರ್ಯಕ್ರಮವು ಪುರೋಹಿತ್ ವಾದಿರಾಜ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾತಾಜಿ ಶಕೀಲ ಹೆಗ್ಡೆ ಸ್ವಾಗತಿಸಿ, ವಂದಿಸಿದರು ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ ನಿರೂಪಿಸಿದರು.

 

Related Articles

error: Content is protected !!