ಕುಂದಾಪುರ : ಬಸ್ರೂರು ಶ್ರೀ ಶಾರದ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗ ಹಾಗೂ ಪುರಾತತ್ವ ಶಾಸನಗಳ ದಾಖಲೀಕರಣ ಮತ್ತು ಸಂಗ್ರಹ ಸರ್ಟಿಫಿಕೇಟ್ ಕೋರ್ಸುಗಳ ಆಶ್ರಯದಲ್ಲಿ ಇತಿಹಾಸದ ದಾಖಲೆ ಉಳಿವಿಗಾಗಿ ಒಂದು ಹೆಜ್ಜೆ ಕಾರ್ಯಕ್ರಮದ ಅಡಿಯಲ್ಲಿ ಬಸ್ರೂರಿನ ಐತಿಹಾಸಿಕ ಶಾಸನಗಳ ಕುರಿತು ಅರಿವು ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕರಾದ ಪುರುಷೋತ್ತಮ ಬಲ್ಯಾಯ ಮಾತನಾಡಿ ಬಸ್ರೂರಿನ ಐತಿಹಾಸಿಕ ಬೆಳವÀಣಿಗೆ ಮತ್ತು ನಡೆದು ಬಂದ ದಾರಿ ಬಗ್ಗೆ ತಿಳಿಸಿದರು. ಪತ್ರಕರ್ತ ಜಾನ್ ಡಿ’ಸೋಜ ಮಾತನಾಡಿ ವಿದ್ಯಾರ್ಥಿಗಳು ಐತಿಹಾಸಿಕ ಪರಂಪರೆಯನ್ನು ಜೀವನದ ವಿಷಯವಾಗಿ ತೆಗೆದುಕೊಂಡು ನಮ್ಮ ಸಂಸ್ಕøತಿ ಮತ್ತು ರಾಜರ ಪರಂಪರೆ ತಿಳಿದುಕೊಳ್ಳಲು ಶಾಸನ ಅಧ್ಯಯನ ಕಾರ್ಯಕ್ರಮವನ್ನು ಕಾಲೇಜು ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ರು.ಶೆ.ಮೆ. ಪ್ರಥಮ ದರ್ಜೆ ಕಾಲೇಜು ಬಾರ್ಕೂರು ಇದರ ಪ್ರಾಂಶುಪಾಲರಾದ ಡಾ. ರಮೇಶ್ ಆಚಾರ್, ಉಪನ್ಯಾಸಕರಾದ ನಾಗರಾಜ ಶೆಟ್ಟಿ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಸಂದೀಪ್ ಕೆ, ನಾರಾಯಣ ವೈ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಶೆಟ್ಟಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಪ್ರದೀಪ ಬಸ್ರೂರು ಶಾಸನಗಳನ್ನು ಓದುವುದರ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.