48
ಮಂದಾರ್ತಿ: ಶಾರದೋತ್ಸವ ಸಮಿತಿ ಬಿಲ್ಲಾಡಿ ಹಾಗೂ ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ 9ನೇ ವರ್ಷದ ಬಿಲ್ಲಾಡಿ ದಸರಾ ಮಹೋತ್ಸವದ ಅಂಗವಾಗಿ ತಾಯಿ ಶಾರದಾ ಮಾತೆಯ ವಿಗ್ರಹವು ಸೈಬರಕಟ್ಟೆ ಜಾನುವಾರ ಕಟ್ಟೆಯವರಿಗೆ ನೆರವೇರುವ ಬೈಕ್ ರ್ಯಾಲಿಯು ಮೂಲಕ ಪುರ ಪ್ರವೇಶದ ಮೆರವಣಿಗೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಚಾಲನೆ ನೀಡಿ ಶಾರದೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷರು,, ಅಧ್ಯಕ್ಷರು, ಮಹಿಳಾ ಅಧ್ಯಕ್ಷರು,, ಕಾರ್ಯದರ್ಶಿ ಹಾಗೂ ಸರ್ವ ಪದಾಧಿಕಾರಿಗಳು ಬಿಲ್ಲಾಡಿ ಶಾರದಾ ಮಹೋತ್ಸವ ಹಾಗೂ ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಸರ್ವ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

