Home » ಕೋಟ : ಅಮೃತೇಶ್ವರಿ ಶರನ್ನವರಾತ್ರಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
 

ಕೋಟ : ಅಮೃತೇಶ್ವರಿ ಶರನ್ನವರಾತ್ರಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

by Kundapur Xpress
Spread the love

ಕೋಟ : ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲ ಕೋಟ ಇದರ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮ ಇದೇ ಅಕ್ಟೋಬರ್ 3ರಿಂದ ಆರಂಭಗೊಳ್ಳಲಿರುವ ಹಿನ್ನಲ್ಲೆಯಲ್ಲಿ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾನುವಾರ ಶ್ರೀ ದೇಗುಲದಲ್ಲಿ ನಡೆಯಿತು.

ದೇಗುಲದ ಆಡಳಿತ ಮಂಡಳಿಯ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶ್ರೀ ದೇಗುಲದಲ್ಲಿ ನಡೆಯಲಿರುವ ಶರನ್ನವರಾತ್ರಿ ಉತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.ದೇವಸ್ಥಾನ ಆಡಳಿತ ವ್ಯವಸ್ಥಾಪಕ ಗಣೇಶ್ ಹೊಳ್ಳ ,ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ,ಕೋಟ ಠಾಣೆಯ ಎಎಸ್‍ಐ ಜಯಪ್ರಕಾಶ್,ಸ್ಥಳೀಯರಾದ ಭದ್ರ ಪೂಜಾರಿ ಸಹಿತ ಮತ್ತಿತರರು ಉಪಸ್ಥಿತರಿದ್ದರು.

 

Related Articles

error: Content is protected !!