Home » ಶರವು ಮಹಾ ಗಣಪತಿ ದೇವಸ್ಥಾನ
 

ಶರವು ಮಹಾ ಗಣಪತಿ ದೇವಸ್ಥಾನ

by Kundapur Xpress
Spread the love

ಯಾವುದಾದರೂ ಒಳ್ಳೆಯ ಕೆಲಸಗಳನ್ನು ಪ್ರಾರಂಭ ಮಾಡುವ ಮೊದಲು ವಿಘ್ನ ವಿನಾಶಕ ಗಣಪತಿಯನ್ನು ಆರಾಧಿಸುವುದು  ಅನಾದಿ ಕಾಲದಿಂದಲೂ ಬಂದ ಸಂಪ್ರದಾಯ ಮಂಗಳೂರಿನಲ್ಲಿರುವ ಪ್ರಸಿದ್ಧ ಶರವು ಗಣಪತಿ ದೇವಸ್ಥಾನವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ

ಪರಶುರಾಮ ಸೃಷ್ಟಿಯ ಕರಾವಳಿ ಪ್ರದೇಶದಲ್ಲಿ  ಒಂದು ವಿಶಿಷ್ಟ ಗಣಪತಿ ದೇವಸ್ಥಾನವಾದ ಶರವು ಮಹಾ ಗಣಪತಿ ದೇವಸ್ಥಾನದ  ಇರುವುದು  ಇಲ್ಲಿಯ ಜನರ ಭಾಗ್ಯವೇ ಸರಿ ಈ ದೇವಸ್ಥಾನಕ್ಕೆ 800 ವರ್ಷಗಳ ಹಿಂದಿನ ಇತಿಹಾಸವಿದೆ  ಶರವು ದೇವಸ್ಥಾನ ಶಿವ ಮತ್ತು ಗಣೇಶನಿಗೆ  ಅರ್ಪಿತವಾದ ಪುರಾತನ ದೇವಾಲಯವಾಗಿದೆ. ಶರವು ಎಂಬ ದೇವಸ್ಥಾನದ ಹೆಸರು ಶರ ಎಂಬ  ಹೆಸರಿನಿಂದ ಬಂದಿದೆ ಶರ ಎಂದರೆ ಬಾಣ ಎಂದು ಅರ್ಥ

ಶರವು ದೇವಸ್ಥಾನದ ದಂತಕತೆಯ ಪ್ರಕಾರ  ಮಹಾರಾಜ ವೀರಬಾಹು  ಹಸುವನ್ನು ಹುಲಿಯ ಬಾಯಿಯಿಂದ ರಕ್ಷಿಸಲು  ಹೊಡೆದಂತ ಬಾಣ  ಹುಲಿಯ ಬದಲಾಗಿ ಹಸುವಿಗೆ  ಚುಚ್ಚಿದ್ದರಿಂದ  ಹಸು  ಪ್ರಾಣ ಬಿಟ್ಟಿತು. ಆತನ ಗೋ ಹತ್ಯ ದೋಷವನ್ನು  ಪರಿಹರಿಸಲು  ರಾಜನು  ಶಿವಲಿಂಗವನ್ನು ಪ್ರತಿಷ್ಠಾಪಿಸಿ  ದೈನಂದಿನ  ಪೂಜಾ ಕರ್ಮಗಳನ್ನು  ಮಾಡಲು ಪ್ರಾರಂಭಿಸಿದನು. ಸಮಯ ಹೋದಂತೆ  ಗಣಪತಿ ಮತ್ತು ದೇವಿ ವಿಗ್ರಹಗಳು  ಉದ್ಭವಿಸಿಕೊಂಡವು ಎಂದು  ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ

ಮಹಾಗಣಪತಿ ದೇವಸ್ಥಾನವು  ಶಿವ ಮತ್ತು ಮಹಾ ಗಣಪತಿ ಚಿತ್ರಗಳೊಂದಿಗೆ  ಗರ್ಭಗುಡಿಯನ್ನು ಹೊಂದಿದೆ.  ದೇವಾಲಯದ ಆವರಣದಲ್ಲಿ ಒಂದು ತೊಟ್ಟಿ ಮತ್ತು ಪವಿತ್ರ ಗೋವಿನ  ವಿಗ್ರಹವನ್ನು ನಾವು ಕಾಣಬಹುದು. ಯಾವುದೇ ಉದ್ಯಮವನ್ನು ಶುರು ಮಾಡುವ ಮೊದಲು ಅಥವಾ  ಯಾವುದೇ ಹೊಸ ಕೆಲಸ ಕಾರ್ಯಗಳನ್ನು ಮಾಡುವ ಮೊದಲು ಭಕ್ತರು ಇಲ್ಲಿಗೆ ಬಂದು ಗಣಪತಿಯ ಆಶೀರ್ವಾದವನ್ನು ಪಡೆದು  ಇಷ್ಟಾರ್ಥಗಳನ್ನು  ಸಿದ್ದಿಸಿಕೊಳ್ಳುತ್ತಾರೆ.  ಕರಾವಳಿಯಲ್ಲಿರುವ  ಪ್ರಮುಖ ಗಣಪತಿ ದೇವಸ್ಥಾನಗಳ ಪೈಕಿ ಶರವು ಮಹಾ ಗಣಪತಿ ದೇವಸ್ಥಾನವು ಕೂಡ ಒಂದು

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

   

Related Articles

error: Content is protected !!