Home » ಶಾಸ್ತ್ರೀಪಾರ್ಕ್‌ : ಇಂದಿನಿಂದ ಗೌಡ್ರ ಗದ್ಲಕ್ಕೆ ಬ್ರೇಕ್
 

ಶಾಸ್ತ್ರೀಪಾರ್ಕ್‌ : ಇಂದಿನಿಂದ ಗೌಡ್ರ ಗದ್ಲಕ್ಕೆ ಬ್ರೇಕ್

by Kundapur Xpress
Spread the love
ಕುಂದಾಪುರ :  ಸದಾ ಜಗಳ…. ಕುಡಿದ ಮತ್ತಿನಲ್ಲಿ ಹೊಡೆದಾಟ…… ಕೀರುಚಾಟ …..ಅಲ್ಲಲ್ಲಿ ಮೂತ್ರ ವಿಸರ್ಜನೆ, ಗೌಡ್ರ ನಿದ್ರೆ ವಿಶ್ರಾಂತಿ ಇದು ಕುಂದಾಪುರ ನಗರದ ಶಾಸ್ತ್ರೀಪಾರ್ಕ್‌ ಫ್ಲೈ ಓವರ್‌ನ ಅಡಿಯಲ್ಲಿ ಪ್ರತಿನಿತ್ಯ ಕಂಡು ಬರುವ ಸಾಮಾನ್ಯ ದೃಶ್ಯ ಇದರಿಂದ ರೋಸಿಹೋದ ಕುಂದಾಪುರದ ನಾಗರಿಕರ ಸತತ ದೂರಿನಿಂದ ಇಂದಿನಿಂದ ಇದೆಲ್ಲಾದಕ್ಕೂ ಕಡಿವಾಣ ಬೀಳಲಿದೆ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇರ ಸೂಚನೆಯ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಆದೇಶದಂತೆ ಕುಂದಾಪುರ ನಗರ ಪೊಲೀಸ್‌ ಇಲಾಖೆ ಕುಂದಾಪುರ ಪುರಸಭೆ ಹಾಗೂ ಕಾರ್ಮಿಕ ಇಲಾಖೆಯವರ ಜಂಟಿ ನೇತೃತ್ವದಲ್ಲಿ ಫ್ಲೈ ಓವರ್‌ನ ಅಡಿಯಲ್ಲಿ ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರ  ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ 
ಈ ಹಿನ್ನಲೆಯಲ್ಲಿ ಬುಧವಾರ ಸಂಜೆ ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರ ಸಭೆಯಲ್ಲಿ ಕಾರ್ಮಿಕ ಇಲಾಖೆಯ ವಿಜಯೇಂದ್ರರವರು ಮಾತನಾಡಿ ನಗರದ ಶಾಸ್ತ್ರೀಪಾರ್ಕ್‌ ಫ್ಲೈ ಓವರ್‌ನ ಅಡಿಯಲ್ಲಿ ಕೂಲಿ ಕಾರ್ಮಿಕರ ನಿದ್ರೆ ವಿಶ್ರಾಂತಿ ಹಾಗೂ ಎಲ್ಲಾ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು ಯಾವುದೇ ಕಾರ್ಮಿಕರು ನಿಯಮವನ್ನು ಮೀರಿದಲ್ಲಿ ನಿರ್ಧಾಕ್ಷಿಣ್ಯವಾಗಿ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು
ಸಂಜೆ ನಡೆದ ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಆನಂದ್‌ ಪುರಸಭಾ ಸದಸ್ಯ ಪ್ರಭಾಕರ್‌ ನಗರ ಸಂಚಾರಿ ಪೊಲೀಸ್‌ ಠಾಣಾ ಉಪ ನಿರೀಕ್ಷಕರಾದ  ಪ್ರಸಾದ್‌ ಕೆ ಪುರಸಭಾ ಆರೋಗ್ಯಾಧಿಕಾರಿ ರಾಘವೇಂದ್ರ ನಾಯ್ಕ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಶಾಸ್ತ್ರೀಪಾರ್ಕ್‌ ಫ್ಲೈ ಓವರ್‌ನ ಅಡಿ ಹಾಗೂ ನಗರದ ರಸ್ತೆಯ ಬದಿಯಲ್ಲಿ ಮಲಗಿ ನಿದ್ರಿಸುವವರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಯಿತು
 

Related Articles

error: Content is protected !!