Home » ಕಾಳಿಬೆಟ್ಟು ಶ್ರೀ ನಾಗಬೊಬ್ಬರ್ಯ ದೇವಸ್ಥಾನ : ಇಂದು 13ನೇ ವರ್ಧಂತಿ
 

ಕಾಳಿಬೆಟ್ಟು ಶ್ರೀ ನಾಗಬೊಬ್ಬರ್ಯ ದೇವಸ್ಥಾನ : ಇಂದು 13ನೇ ವರ್ಧಂತಿ

by Kundapur Xpress
Spread the love

ಕುಂದಾಪುರ : ನಗರದ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿರುವ ಎಪಿಎಂಸಿ ಮಾರ್ಕೆಟ್ ಇದರ ಪಕ್ಕದಲ್ಲಿರುವ  ಕಾಳಿಬೆಟ್ಟು ಶ್ರೀ ನಾಗಬೊಬ್ಬರ್ಯ ದೇವಸ್ಥಾನದ 13ನೇ ವರ್ಷದ ಪ್ರತಿಷ್ಠಾ ವರ್ಧಂತಿಯು ಇಂದು ಜರುಗಲಿದೆ

ಬೆಳಿಗ್ಗೆ 7.00 ರಿಂದ ಶ್ರೀ ದೇವರಿಗೆ ಫಲ ಸಮರ್ಪಣೆ ಗುರು ಪ್ರಾರ್ಥನೆ ಗಣಪತಿ ಪೂಜೆ ಪ್ರಧಾನ ಹೋಮ ಪ್ರಧಾನ ಕಲಾತತ್ವ ಹೋಮ ಹಾಗೂ ಶ್ರೀ ನಾಗದೇವರಿಗೆ ಮತ್ತು ಸಹ ಪರಿವಾರ ಬೊಬ್ಬರ್ಯ ದೇವರಿಗೆ ಕಳಶಾಭಿಷೇಕ ಹಾಗೂ ಮಹಾಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಲಿದೆ ಇಂದು ಬೆಳಿಗ್ಗೆ 10-45 ಕ್ಕೆ ನಾಗದೇವರ ದರ್ಶನ ಪ್ರಸಾದ ವಿತರಣೆ ಪಲ್ಲಪೂಜೆ ಬ್ರಾಹ್ಮಣರ ಆರಾಧನೆ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದ್ದು ಎಲ್ಲಾ ಧಾರ್ಮಕ ಕಾರ್ಯಕ್ರಮಗಳು ಅರ್ಚಕ ನಾರಾಯಣ ಹೊಳ್ಳರವರ ನೇತೃತ್ವದಲ್ಲಿ ನಡೆಯಲಿದೆ 

ಶ್ರೀ ಕಾಳಿ ಹಾಗೂ ಸಹ ಪರಿವಾರ ದೈವಗಳ ಗೆಂಡ ಮಹೋತ್ಸವ ಜರುಗಲಿದ್ದು ರಾತ್ರಿ 9:00 ರಿಂದ ಶ್ರೀಕ್ಷೇತ್ರ ಮಡಮಕ್ಕಿ ಅವರಿಂದ ಕಾರ್ಣಿಕದ ಗುಳಿಗ  ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಅಧ್ಯಕ್ಷರಾದ ವಾಸುದೇವ ಮಡಿವಾಳ ತಿಳಿಸಿದ್ದಾರೆ

 

Related Articles

error: Content is protected !!