207
ಕುಂದಾಪುರ : ಪಹಲ್ಲಾಮ್‌ನಲ್ಲಿ ನಿರಾಯುಧ ಪ್ರವಾಸಿಗರ ಮೇಲೆ ನಡೆದ ಹೇಡಿತನದ ದಾಳಿಯ ನಂತರ ಪಾಕ್ ಪ್ರಾಯೋಜಿತ ಭಯೋತ್ಪಾದಕರು ಮತ್ತು ಅವರ ಬೆಂಬಲಿತ ಸಂಘಟನೆಯ ನಾಶಕ್ಕಾಗಿ ತೆಗೆದುಕೊಂಡ “ಆಪರೇಷನ್ ಸಿಂಧೂರ್” ಎಂಬ ನಿರ್ಣಾಯಕ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸುವ, ಮತ್ತು ನಮ್ಮ ಸೈನಿಕರ ಆತ್ಮಬಲವನ್ನು ಹೆಚ್ಚಿಸಲು ಅವರಿಗೆ ಇನ್ನಷ್ಟು ಆರೋಗ್ಯವನ್ನು ಕರುಣಿಸಲು ಶ್ರೀ ಒಂಭತ್ತುದಂಡಿಗೆ ಚಿಕ್ಕಮ್ಮ ದೇವಿ ದೇವಸ್ಥಾನದಲ್ಲಿ ಶ್ರೀದೇವಿಗೆ ಪೂಜೆಯನ್ನು ಸಲ್ಲಿಸಿ, ಪ್ರಾರ್ಥಿಸಲಾಯಿತು.
ನಂತರ ಪ್ರಮುಖ ರಸ್ತೆಯ ಅಕ್ಕಪಕ್ಕದ ಮನೆ ಮನೆಗೆ ತೆರಳಿ ತಾಯಂದಿರಿಗೆ *ಸಿಂಧೂರ*ಇಟ್ಟು, ರಾಷ್ಟ್ರ ಪ್ರೇಮದ ಅರಿವನ್ನು ಮೂಡಿಸಿ,ರಾಷ್ಟ್ರ ರಕ್ಷಣೆಯ ಜವಾಬ್ದಾರಿಯನ್ನು ಮೂಡಿಸಲಾಯಿತು

