ಉಡುಪಿ: ಕೃಷ್ಣಪೂಜೆ ಜೀವನದ ದೊಡ್ಡ ಸುಯೋಗ. ಕೃಷ್ಣನ ಮೇಲೆ ಶ್ರದ್ಧೆ ಭಕ್ತಿ ಇದ್ದವರು ಮಾತ್ರ ಪರ್ಯಾಯದಲ್ಲಿ ಭಾಗವಹಿಸಲು ಸಾಧ್ಯ ನಮ್ಮದು ವಿಶ್ವ ಗೀತಾ ಪರ್ಯಾಯ ಹೀಗಾಗಿ ದೇವರ ಇಚ್ಛೆಯಂತೆ ವಿಶ್ವಪ್ರಿಯ ತೀರ್ಥರು ಪೀಠದಲ್ಲಿ ಕುಳ್ಳರಿಸಿದ್ದಾರೆ ಕೃಷ್ಣನ ಪೂಜೆ ಸೇವೆ ಮಾಡುವುದು ಸುವರ್ಣ ಅವಕಾಶ ಎಂದು ಪರ್ಯಾಯ ಪೀಠವನ್ನೇರಿದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಹೇಳಿದರು
ಅವರು ಗುರುವಾರ ಮುಂಜಾನೆ ಸರ್ವಜ್ಞ ಪೀಠವನ್ನೇಂದ ಬಳಿಕ ರಾಜಾಂಗಣದಲ್ಲಿ ನಡೆದ ದರ್ಬಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾವು ನಾಲ್ಕನೇ ಬಾರಿಗೆ ಪರ್ಯಾಯ ಅಲಂಕರಿಸುತ್ತಿದ್ದು ಸನ್ಯಾಸ ಆಶ್ರಮ ಪೂರೈಸಿ 50 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಕೃಷ್ಣನಿಗೆ ಚಿನ್ನದ ರಥ ಸಮರ್ಪಿಸುವ ಸಂಕಲ್ಪ ಹೊಂದಿದ್ದೇನೆ. ವಿದೇಶ ಪ್ರವಾಸಕ್ಕಿಂತ ಕೃಷ್ಣಪೂಜೆಯೇ ಮುಖ್ಯ. ಈ 2 ವರ್ಷಗಳ ಪರ್ಯಾಯದ ಅವಧಿಯಲ್ಲಿ ಗೀತೆಗೆ ಸಂಬಂಧಪಟ್ಟ ಅನೇಕ ಯೋಜನೆ ರೂಪಿಸಲಾಗಿದೆ. ಪುತ್ತಿಗೆ ಪರ್ಯಾಯವು ವಿಶ್ವ ಗೀತ ಪರ್ಯಾಯವಾಗಿರಲಿದೆ ಎಂದು ನುಡಿದರು