ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಮತ್ತು ತಿರುಮಲ ದಾಸಸಾಹಿತ್ಯ ಪ್ರಾಜೆಕ್ಟ್, ತಿರುಪತಿ ಆಶ್ರಯದಲ್ಲಿ ಮೂರು ದಿನಗಳ ದಾಸಶ್ರೇಷ್ಠ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮ ವೈಭವದಿಂದ ನಡೆಯಿತು
ಉಡುಪಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರಿಗೂ ಶ್ರೀ ಪುರಂದರದಾಸರಿಗೂ ವಿಶೇಷ ನಂಟು. ಉಡುಪಿ ಶ್ರೀ ಕೃಷ್ಣ ಮತ್ತು ಪ್ರಾಣ ದೇವರನ್ನು ತಮ್ಮ ಅನೇಕ ಕೀರ್ತನೆಗಳಲ್ಲಿ ವರ್ಣಿಸಿ ಸ್ತುತಿಸಿರುವ ಪುರಂದರದಾಸರು ಇಲ್ಲಿನ ಚಂದ್ರೇಶ್ವರ ಅನಂತೇಶ್ವರ ಮತ್ತು ಮಧ್ವ ಸರೋವರವನ್ನು ವರ್ಣಿಸಿದ್ದಾರೆ. ಆರಾಧನಾ ಮಹೋತ್ಸವದಲ್ಲಿ ಶುಕ್ರವಾರ ಶ್ರೀ ಪುರಂದರದಾಸರ ಹಾಡುಗಳ ಶತಕಂಠ ಗಾಯನ ನಡೆಯಿತು
ಸುಗುಣ ಶ್ರೀ ಭಜನಾ ಮಂಡಳಿಯ ಸುಮಾರು 600 ಮಂದಿ ಮಹಿಳೆಯರುಶಾಂತ ಹೆಬ್ಬಾರ್ ಅವರ ನೇತೃತ್ವದಲ್ಲಿ ಸುಮಾರು 3 ಗಂಟೆಗಳ ಕಾಲ ಶ್ರೀ ಪುರಂದರ ದಾಸರ ಕೀರ್ತನೆಗಳನ್ನು ಹಾಡಿದರು. ಇದೇ ಸಂದರ್ಭ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಪುರಂದರ ದಾಸರ ಭಾವಚಿತ್ರ ಕೃತಿಗಳ ಶೋಭಾಯಾತ್ರೆ ರಥಬೀದಿಯಲ್ಲಿ ನೆರವೇರಿತು.