127
ಕುಂದಾಪುರ : ಆಪರೇಷನ್ ಸಿಂದೂರು ಸೇನಾ ಕಾರ್ಯಾಚರಣೆಯ ಯಶಸ್ಸು ಮತ್ತು ಯೋಧರಿಗೆ ಒಳಿತನ್ನು ಕೋರಿ ಮುಜರಾಯಿ ಇಲಾಖೆ ಆದೇಶದ ಮೇರೆಗೆ ವಿಶೇಷ ಪೂಜೆಯನ್ನು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಪಂಚಾಮೃತ ಮಂಗಳಾರತಿ ಮತ್ತು ಸಾಮೂಹಿಕ ಪ್ರಾರ್ಥನೆಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ವಾಸುದೇವ್ ಯಡಿಯಾಳ್, ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ , ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್ , ಅಶೋಕ್ ಸುವರ್ಣ , ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸತೀಶ್ ಗಾಣಿಗ , ವಿಠಲ್ ಕಾಂಚನ್ , ನಾಗರಾಜ್ ನಾಯಕ್, ದಿನೇಶ್ ಬೆಟ್ಟ , ಸೀಮಾ ಪೂಜಾರಿ , ಗಿರಿಜಾ ಮತ್ತು ಐಟಿ ಸೆಲ್ ರಾಜ್ಯ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ , ಕಾಂಗ್ರೆಸ್ ಸದಸ್ಯರಾದ ಕೋಡಿ ಸುನಿಲ್ ಪೂಜಾರಿ ಅರುಣ್ ಪಟೇಲ್ ಇನ್ನಿತರರು ಉಪಸ್ಥಿತರಿದ್ದರು.

