Home » ಶ್ರೀ ಮೈಲಾರೇಶ್ವರ ದೇವಸ್ಥಾನ : ನೂತನ ಅಧ್ಯಕ್ಷರಾಗಿ ಶ್ರೀ ಮಧುಕರ್.ಕೆ.
 

ಶ್ರೀ ಮೈಲಾರೇಶ್ವರ ದೇವಸ್ಥಾನ : ನೂತನ ಅಧ್ಯಕ್ಷರಾಗಿ ಶ್ರೀ ಮಧುಕರ್.ಕೆ.

by Kundapur Xpress
Spread the love

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಧಾಯ ದತ್ತಿಗಳ ಇಲಾಖೆ ಇದರ “ಸಿ” ದರ್ಜೆಯ ದೇವಸ್ಥಾನವಾದ ಕುಂದಾಪುರ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯು ಇತ್ತೀಚಿಗೆ ರಚನೆಯಾಯಿತು.ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಮಧುಕರ್. ಕೆ. ಅವರು ಸರ್ವಾನುಮತದಿಂದ ಆಯ್ಕೆಯಾದರು. ನೂತನ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಶ್ರೀ ಮಂಜುನಾಥ ಭಟ್ (ಅರ್ಚಕರು), ಶ್ರೀಮತಿ ಗೀತಾ ರವೀಂದ್ರ ಕೆ. ಜಿ., ಶ್ರೀಮತಿ ಶಾರದಾ ರಮಾನಂದ ಕೆ. ಜಿ, ಶ್ರೀ ಕೆ. ಪಿ. ಅರುಣ್, ಶ್ರೀ ಜಯಪ್ರಕಾಶ್, ಶ್ರೀಮತಿ ಲಕ್ಷ್ಮೀ ಅಶೋಕ್, ಶ್ರೀ ಸುಧೀರ್ ಮತ್ತು ಶ್ರೀ ಕೃಷ್ಣ ಕುಮಾರ್ ಆಯ್ಕೆಯಾಗಿರುತ್ತಾರೆ.

ದೇವಸ್ಥಾನದ ಆಡಳಿತಾಧಿಕಾರಿಯಾದ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಶ್ರೀ ಮಹೇಶ್ ಮತ್ತು ವ್ಯವಸ್ಥಾಪನಾ ಸಮಿತಿಯ ನಿರ್ಗಮಿತ ಅಧ್ಯಕ್ಷರಾದ ಶ್ರೀ ರಮೇಶ ಬಿಲ್ಲವ ಅವರು ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.

 

Related Articles

error: Content is protected !!