Home » ಶ್ರೀರಾಮ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ
 

ಶ್ರೀರಾಮ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ

ಶೇಕಡ 17 ಡಿವಿಡೆಂಡ್‌ ಘೋಷಣೆ

by Kundapur Xpress
Spread the love

ಕುಂದಾಪುರ : ಶ್ರೀರಾಮ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ ಮಹಾಸಭೆಯು ಕುಂದಾಪುರ ನಗರದ ರಾಮಮಂದಿರದ ರಜತ ಮಹೋತ್ಸವ ಸಭಾಂಗಣದಲ್ಲಿ ರವಿವಾರ ಜರುಗಿತು ಮುಖ್ಯ ಅತಿಥಿಗಳಾಗಿ ವಿಶ್ವ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ಎಚ್‌ ಆರ್‌ ಶಶಿಧರ್‌ ನಾಯಕ್‌ ಆಗಮಿಸಿದ್ದರು

ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ನಾಗರಾಜ್‌ ಕಾಮಧೇನು ಮಾತನಾಡಿ ಶ್ರೀರಾಮ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ ವರದಿ ಸಾಲಿನಲ್ಲಿ ರೂ. 219 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, ರೂ.167.96 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 17  ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದರು ಸಂಘವು ವರದಿ ಸಾಲಿನಲ್ಲಿ ರೂ. 6308.38 ಲಕ್ಷ ಠೇವಣಿ ಹೊಂದಿದ್ದು  ಸದಸ್ಯರಿಗೆ ರೂ. 4833.99 ಲಕ್ಷ ಸಾಲ ನೀಡಿದೆ ವಿವಿಧ ನಿಧಿಗಳಲ್ಲಿ 985.55 ಲಕ್ಷ ರೂ. ಸಂಚಯಿಸಲಾಗಿದೆ ಎಂದು ನುಡಿದರು

ಮುಖ್ಯ ಅತಿಥಿಯಾಗಿ ಆಗಮಿಸಿದ ಎಚ್‌ ಆರ್‌ ಶಶಿಧರ್‌ ನಾಯಕ್‌ ಮಾತನಾಡಿ ರಾಮಕ್ಷತ್ರಿಯ ಸಮಾಜದ ಮುಖಂಡರು ಸಮಾಜದ ಏಳಿಗೆಗಾಗಿ ಸ್ಥಾಪಿಸಿದ ಈ ಸೊಸೈಟಿಯು ಇಂದು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯವಾಗಿದ್ದು  28 ನೇ ವರ್ಷವನ್ನು ಪೂರೈಸಿದ ಶ್ರೀರಾಮ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿಯು ಮುಂದಿನ ದಿನಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿ ಬೆಳೆಯಲಿ ಎಂದು ಆಶಿಸಿದರು

ಮಹಾಸಭೆಯ ಸಮಾರಂಭದಲ್ಲಿ ಪ್ರತಿಭಾನ್ವಿತ 17 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾಗಿ ತಲ್ಲೂರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಗಿರೀಶ್‌ ಎಸ್‌ ನಾಯಕ್‌ ಹಂಗಳೂರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಸತೀಶ್‌ ನೇರಂಬಳ್ಳಿ ಉಪ್ಪೂರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಗಾಯತ್ರಿ ಉಪ್ಪೂರು ಹಾಗೂ ಕೋಟೇಶ್ವರ ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಆಶಾ ರಾಮಚಂದ್ರ ರವರನ್ನು ಸನ್ಮಾನಿಸಲಾಯಿತು ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ನ ಮಾಜಿ ಅಧ್ಯಕ್ಷ ಹಾಗೂ 5ನೇಭಾರಿ ಸದಸ್ಯರಾಗಿ ಆಯ್ಕೆಯಾದ ವೆಂಕಟೇಶ್ವರ ಸ್ವೀಟ್ಸ್‌ ನ ಮಾಲಕರಾದ ಶ್ರೀಧರ್‌ ಪಿ ಎಸ್‌ ರವರನ್ನು ಸನ್ಮಾನಿಸಲಾಯಿತು ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ಡಿ ಕೆ ಪ್ರಭಾಕರ್‌ ರವರನ್ನು ಗುರುತಿಸಿ ಗೌರವಿಸಲಾಯಿತು 

 ಸಂಸ್ಥೆಯ ಉಪಾಧ್ಯಕ್ಷ  ಬಿ ರಾಧಾಕೃಷ್ಣ ನಾಯಕ್ ಹಾಗೂ ಸದಸ್ಯರಾದ ಅಶೋಕ್‌ ಬೆಟ್ಟಿನ್‌ ಜಿ.ಆರ್.ಪ್ರಕಾಶ್‌ ಶ್ರೀ ಮಂಜುನಾಥ ಮದ್ದೋಡಿ, ಗೋಪಾಲಕೃಷ್ಣ, ರವೀಂದ್ರ ಕಾವೇರಿ,ಶ್ರೀಧರ ಪಿ.ಎಸ್, ಕೆ.ರಾಮಾನಾಥ್‌ ನಾಯ್ಕ್‌, ಅಜೇಯ್ ಹವಾಲ್ದಾರ್, ಎನ್‌.ವಿ. ದಿನೇಶ್ ,ಶ್ರೀಮತಿ ಪಿ ದೇವಕಿ ,ಶ್ರೀಮತಿ ಡಿ.ಕೆ ಲಕ್ಷ್ಮಿ ಪ್ರಭಾಕರ್,  ಡಿ ಸದಾಶಿವ್  ಎಮ್.ಜಿ ರಾಜೇಶ್‌, ಕರುಣಾಕರ ರಾವ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಬಿ (ಪ್ರಭಾರ)  ಉಪಸ್ಥಿತರಿದ್ದರು ಬಿ ರಾಘವೇಂದ್ರ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನಾಗರಾಜ್‌ ಕಾಮಧೇನು ಸ್ವಾಗತಿಸಿ ಅಶೋಕ್‌ ಬೆಟ್ಟಿನ್‌ ವಂದಿಸಿದರು

ಫೋಟೋ : ಉದಯ್‌ ಕುಂದಾಪುರ

   

Related Articles

error: Content is protected !!