Home » ಕರಾವಳಿಯಲ್ಲಿ ಕಾಂಗ್ರೇಸ್‌ ಸಮಾವೇಶ
 

ಕರಾವಳಿಯಲ್ಲಿ ಕಾಂಗ್ರೇಸ್‌ ಸಮಾವೇಶ

by Kundapur Xpress
Spread the love

ಮಂಗಳೂರು : ಭದ್ರಕೋಟೆಯಾಗಿರುವ ಕರಾವಳಿ ನೆಲದಿಂದಲೇ ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದ್ದು, ಬೃಹತ್ ಶಕ್ತಿ ಪ್ರದರ್ಶನವನ್ನೂ ಮಾಡಿದೆ. ಅಲ್ಲದೆ ರಾಜ್ಯ, ದೇಶಕ್ಕೆ ’20 ಸೀಟ್’ ಸಂದೇಶವನ್ನು ಒಕ್ಕೊರಲಿನಿಂದ ರವಾನಿಸಿದೆ. ಕಳೆದಲೋಕಸಭೆ, ವಿಧಾನಸಭೆಚುನಾವಣೆಗಳಿಂದ ಕಂಗೆಟ್ಟಿದ್ದ ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಸಮಾವೇಶ ಬೂಸ್ಟ್ ನೀಡಿದೆ. ಪರಿಣಾಮವಾಗಿ ಸಹಸ್ರಾರು ಮಂದಿ ಕಾರ್ಯಕರ್ತರು, ಸಾರ್ವಜನಿಕರು ಸಮಾವೇಶದಲ್ಲಿ ಕಿಕ್ಕಿರಿದು ಸೇರಿದ್ದರು. ಈ ಮೂಲಕ ಕೇಸರಿ ನೆಲದಲ್ಲಿ ಕೈ ಪಕ್ಷ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನ ಮಾಡಿದೆ. ಮಲ್ಲಿಕಾರ್ಜುನ ಖರ್ಗೆ,  ಸಿದ್ದರಾಮಯ್ಯ, ಡಿಕೆಶಿ ಮೂವರೂ ಕರಾವಳಿ ಸೇರಿದಂತೆ 20 ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂಬ ಖಚಿತ ಭರವಸೆ ವ್ಯಕ್ತಪಡಿಸಿ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದ್ದಾರೆ.

 

Related Articles

error: Content is protected !!