ಕುಂದಾಪುರ : ಕುಂದಾಪುರ ನಗರದಲ್ಲಿರುವ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಗರ್ಭಗುಡಿಯ ಮುಖ ಮಂಟಪಕ್ಕೆ ಬೆಳ್ಳಿ ಹೋದಿಸುವ ಹಾಗೂ ದ್ವಾರ ಬಾಗಿಲಿಗೆ ತಾಮ್ರ ಹೊದಿಕೆಯ ಕಾರ್ಯ ಭರದಿಂದ ಸಾಗುತ್ತಿದ್ದು ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ-ಅಪರೇಟವ್ ಸೊಸೈಟಿಯಿಂದ 1 ಕೆ ಜಿ ಬೆಳ್ಳಿಯನ್ನು ಕುಂದಾಪುರದ ರಾಮಕ್ಷತ್ರಿಯರ ಸಂಘದ ಸದಸ್ಯರಿಗೆ ರಾಮಮಂದಿರ ದೇಗುಲದಲ್ಲಿ ಸಹ್ತಾಂತರಿಸಲಾಯಿತು
ಈ ಸಂದರ್ಭದಲ್ಲಿ ಶ್ರೀರಾಮ ಕ್ರೆಡಿಟ್ ಕೋ-ಅಪರೇಟವ್ ಸೊಸೈಟಿಯ ಅಧ್ಯಕ್ಷರಾದ ನಾಗರಾಜ್ ಕಾಮಧೇನು ಅಶೋಕ್ ಬೆಟ್ಟಿನ್ ಜಿ ಆರ್ ಪ್ರಕಾಶ್ ರಾವ್ ರಮಾನಾಥ್ ನಾಯಕ್ ಲಕ್ಷ್ಮಿ ಡಿ ಕೆ ಪ್ರಭಾಕರ್ ದೇವಕಿ ಸಣ್ಣಯ್ಯ ರಾಜೇಶ್ ಗಂಗೊಳ್ಳಿ ಕೆಎಚ್ ಚಂದ್ರಶೇಖರ್ ಹಾಗೂ ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಲಕ್ಷ್ಮೀಶ್ ಹವಲ್ದಾರ್ ಉಪಸ್ಥಿತರಿದ್ದರು