ಕೋಟ: ದೇಶದ ಆರ್ಥಿಕತೆಗೆ ಅನುಗುಣವಾಗಿ ದೇಶಾದ್ಯಂತ ಬೇರೆ ಬೇರೆ ರೀತಿಯಲ್ಲಿ ಸಂಜೀವಿನಿ ಸಂಘಗಳ ರಚನೆಗೊಂಡಿದೆ ಈ ಮೂಲಕವೇ ಸ್ತಿçà ಬಲವರ್ಧನೆ ಅನಿವಾರ್ಯತೆ ಎಂಬುವುದನ್ನು ಸಾಬೀತುಗೊಳಿಸಿದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಹೇಳಿದರು.
ಶುಕ್ರವಾರ ಕೋಟತಟ್ಟು ಕಾರಂತ ಥೀಮ್ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಮಪಂಚಾಯತ್‌ನ ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸಂಜೀವಿನಿ ಒಕ್ಕೂಟಗಳು ಕರಾರುವಾಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುವುದಕ್ಕೆ ಎಸ್ ಎಲ್ ಆರ್ ಎಂ ಘಟಕಗಳೇ ಸಾಕ್ಷಿಯಾಗಿವೆ ಅಲ್ಲದೆ ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯುತ್ತಿದ್ದಾರೆ,ಸಾಲ ಪಡೆದು ಸ್ವಂತ ಕಾಲಮೇಲೆ ನಿಂತು ವ್ಯವಹರಿಸುವ ಮನಸ್ಥಿತಿಯನ್ನು ಸೃಷ್ಠಿಸಿಕೊಂಡಿದ್ದಾರೆ ಇದು ಆಶಾದಾಯಕ ಬೆಳವಣಿಗೆಯಾಗಿದೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಕರೆ ಇತ್ತರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಜನಿ ಪಡುಕರೆ,ಗೀತಾ,ಶಾರದ,ಪ್ರದೀಪ್,ಸುಂದರ್, ಗಾಯಿತ್ರಿ ಉಡುಪ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂಧೂರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಂಗೀತ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್,ಪAಚಾಯತ್ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ,ಪಂಚಾಯತ್ ಸದಸ್ಯರಾದ ವಾಸು ಪೂಜಾರಿ,ರವೀಂದ್ರ ತಿಂಗಳಾಯ,ವಿದ್ಯಾ ಸಾಲಿಯಾನ್,ಕಾರ್ಯದರ್ಶಿ ಸುಮತಿ ಅಂಚನ್,ಸAಜೀವಿನಿ ಒಕ್ಕೂಟದ ತಾಲೂಕು ವ್ಯವಸ್ಥಾಪಕ ಪ್ರಶಾಂತ್,ಪAಚಾಯತ್ ಗ್ರಾಮಸಭೆಯ ನೋಡೆಲ್ ಅಧಿಕಾರಿ ಅನಿಲ್ ಕುಮಾರ್,ಸಂಜೀವಿನಿ ಒಕ್ಕೂಟದ ತಾಲೂಕು ಕೃಷಿ ಸಖಿ ಜ್ಯೋತಿ, ಕೋಟತಟ್ಟು ಸಿಂಧೂರ ಒಕ್ಕೂಟದ ಕೋಶಾಧಿಕಾರಿ ಅನಿತಾ, ಉಪಾಧ್ಯಕ್ಷೆ ಅಂಬಿಕಾ,ಕೃಷಿ ಸಖಿ ಗೀತಾ ಶಂಕರ್,ಪಶುಸಖಿ ಸುಜಾತ ಕಾಳಿಂಗ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಲ್‌ಸಿಆರ್‌ಪಿ ವಸಂತಿ ಕುಂದರ್ ವರದಿ ವಾಚಿಸಿದರು.ಎಂಬಿಕೆ ವಾಣಿಶ್ರೀ ಆಚಾರ್ ಲೆಕ್ಕ ಪತ್ರ ಮಂಡಿಸಿದರು, ಎಲ್‌ಸಿಆರ್‌ಪಿ ಸುಜಾತ ಉದಯ್ ತಿಂಗಳಾಯ ಸ್ವಾಗತಿಸಿದರು. ಕಾರ್ಯಕ್ರಮವನ್ನು ಎಫ್‌ಎಲ್‌ಆರ್ ವಸಂತಿ ಹಂದಟ್ಟು ನಿರೂಪಿಸಿದರು. ಎಲ್‌ಸಿಆರ್‌ಪಿ ಶ್ಯಾಮಲ ಚಂದ್ರ ಪುತ್ರನ್ ವಂದಿಸಿದರು.
ಕೋಟತಟ್ಟು ಕಾರಂತ ಥೀಮ್ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಮಪಂಚಾಯತ್‌ನ ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಜನಿ ಪಡುಕರೆ,ಗೀತಾ,ಶಾರದ,ಪ್ರದೀಪ್,ಸುಂದರ್, ಗಾಯಿತ್ರಿ ಉಡುಪ ಇವರುಗಳನ್ನು ಸನ್ಮಾನಿಸಲಾಯಿತು. ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್,ಪAಚಾಯತ್ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ,ಪಂಚಾಯತ್ ಸದಸ್ಯರಾದ ವಾಸು ಪೂಜಾರಿ ಮತ್ತಿತರರು ಇದ್ದರು.