ಕೋಟ : ಕಾರಂತ ಥೀಮ್ ಪಾರ್ಕ್ ಕೋಟ ಇಲ್ಲಿ ಛಾಯಾ ತರಂಗಿಣಿ ಸಂಗೀತ ಶಾಲೆ ಗಿಳಿಯಾರು ಹರ್ತಟ್ಟು ಇದರ ವಾರ್ಷಿಕೋತ್ಸವಕಾರ್ಯಕ್ರಮ ಶನಿವಾರ ಜರಗಿತು.ಮುಖ್ಯ ಅತಿಥಿಯಾಗಿ ಸ್ನೇಹಕೂಟದ ಸಂಚಾಲಕಿ ಭಾರತಿ ವಿ.ಮಯ್ಯ ಅವರು ಭಾಗವಹಿಸಿ ಮಾತನಾಡಿ ಸಂಗೀತ ಎಂಬುದು ಒಂದು ವಿಶಾಲ ಸಾಗರವಿದ್ದಂತೆ ಅದರಲ್ಲಿನ ಒಂದು ಬೊಗಸೆಯಷ್ಟು ನೀರನ್ನು ಕುಡಿದರೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಅವರ ಪೋಷಕರು ಅನುಭವಿಸುವ ಒತ್ತಡದ ಬದುಕಿಗೆ ಅದು ಸಂಜೀವಿನಿ ಆಗಬಲ್ಲದು ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಮಣೂರು ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ.ಎ.ಕುಂದರ್ ವಹಿಸಿದ್ದರು. ಬಳಿಕ ಸಂಗೀತ ಶಾಲಾ ಮಕ್ಕಳಿಂದ ಸುಮಾರು ಒಂದು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ಶಿಕ್ಷಕಿ ಭಾಗ್ಯೇಶ್ವರಿ ಮಯ್ಯ ಅವರ ನಿರ್ದೇಶನದಲ್ಲಿ ಜರಗಿತು.ಹಾರ್ಮೋನಿಯಂನಲ್ಲಿ ಭಾರ್ಗವ .ಜಿ ಮಯ್ಯ ,ವಯಲಿನ್‍ನಲ್ಲಿ ವಿಧಾತ್ರಿ.ಜಿ.ಮಯ್ಯ ಹಾಗೂ ಮೃದಂಗದಲ್ಲಿ ಗೋಪಾಲ.ಜಿ ಮಯ್ಯ ಸಹಕರಿಸಿದರು.ಕಾರ್ಯಕ್ರಮವನ್ನು ಗೋಪಾಲ್.ಜಿ.ಮಯ್ಯ ಕಾರ್ಯಕ್ರಮದ ನಿರೂಪಣೆಗೈದರು.