ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇಲ್ಲಿ ರೋವರ್ಸ್-ರೇಂಜರ್ಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪೋಷಣ ಅಭಿಯಾನ ಹಾಗೂ ಆಹಾರ, ಆರೋಗ್ಯ, ಜೀವನಶೈಲಿ, ಇವುಗಳ ಕುರಿತು ರಸಪ್ರಶ್ನೆ ಮತ್ತು ಪೋಷಣಾ ಅಭಿಯಾನದ ಪೋಸ್ಟರ್ ಸ್ಪರ್ಧೆ ಏರ್ಪಡಿಸಲಾಗಿತ್ತು.ರಸಪ್ರಶ್ನೆ ಸ್ಪರ್ಧೆಯಲ್ಲಿ 74 ವಿದ್ಯಾರ್ಥಿಗಳು ಹಾಗೂ ಪೋಷಣ್ ಅಭಿಯಾನದಲ್ಲಿ 14 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರತಿ ವಿದ್ಯಾರ್ಥಿಯು ಆಹಾರ ಮತ್ತು ಜೀವನ ಶೈಲಿಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ ಅರಿವು ಮೂಡಿಸಿದರು ಹಾಗೂ ಸಮತೋಲನ ಆಹಾರ ಮತ್ತು ಪೋಷಕಾಂಶಗಳಾದ ಪ್ರೋಟಿನ್, ವಿಟಮಿನ್, ಖನಿಜಗಳು ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.ಇತ್ತೀಚಿನ ದಿನಗಳಲ್ಲಿ ಅಸಮರ್ಪಕ ಆಹಾರ ಪದ್ಧತಿಗಳು,ಅತಿಯಾದ ಫಾಸ್ಟ್‍ಪುಡ್ ಸೇವನೆ ಮತ್ತು ಅನಾರೋಗ್ಯಕರ ಜೀವನ ಶೈಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಮತೋಲನ ಆಹಾರ, ಪೋಷಕಾಂಶಗಳ ಅವಶ್ಯಕತೆ,ದೇಹ,ಮನಸ್ಸು ಹಾಗೂ ಆಹಾರದ ಅವಿನಾಭಾವ ಸಂಬಂಧ ಮತ್ತು ಆರೋಗ್ಯಕರ ಜೀವನ ಶೈಲಿಯು ವಿದ್ಯಾಭ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಆರೋಗ್ಯ ಪೌಷ್ಠಿಕತೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಾಮರಾಯ ಆಚಾರ್ಯ ಮತ್ತು ಎಲ್ಲಾ ಬೋಧಕ – ಬೋಧಕೇತರ ವರ್ಗದವರು ಈ ಪೋಷಣಾ ಅಭಿಯಾನದಲ್ಲಿ ಭಾಗವಹಿಸಿದ್ದರು.0
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ನಮ್ಮ ಕಾಲೇಜಿನ ರೋವರ್ಸ್ ಸ್ಕೌಟ್ಸ್ ಲೀಡರ್ ಕಾರ್ತಿಕ್ ಪೈ, ರೇಂಜರ್ ಲೀಡರ್ ಡ, ಮುನಿರತ್ನಮ್ಮ ಎಲ್.ಎಂ. ಮತ್ತು ರೋವರ್ಸ್-ರೇಂಜರ್ಸ್ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿದ್ದರು.