ಕೋಟ : ಉಡುಪಿಯ ಹೊಸಬದುಕು ಅನಾಥಾಶ್ರಮದಲ್ಲಿ ಮಣೂರಿನ ಸ್ನೇಹಕೂಟದಿಂದ ಒಂದು ದಿನ ಅನಾಥಾಶ್ರಮದಲ್ಲಿ ಭಾವ ಮಿಲನ ಎನ್ನುವ ಶೀರ್ಷಿಕೆಯಡಿ ವಿನೂತ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಂಡಿತು.
ಕೋಟದ ಮಣೂರಿನ ಸ್ನೇಹಕೂಟ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ಸಾಂಸ್ಕöÈತಿಕ ಸಾಮಾಜಿಕ ,ಶೈಕ್ಷಣಿಕ ವಿನೂತನ ಮಾದರಿಯ ಮಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ.
ಪ್ರತಿ ತಿಂಗಳ ಒರ್ವ ಸದಸ್ಯರ ಮನೆಗೆ ತೆರಳಿ ನಮ್ಮ ಸಂಸ್ಕ್ರತಿ ,ಆಚಾರ ವಿಚಾರಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಅನುಷ್ಠಾನಗಳ ಬಗ್ಗೆ ಸಾಮಾಜಿಕ ಪ್ರಜ್ಞೆ ಮೆರೆಯುತ್ತಿದೆ.ಶೈಕ್ಷಣಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಸಲಹುತ್ತಿದೆ.
ಈ ಸಂಸ್ಥೆ ಶನಿವಾರ ಹೊಸಬದುಕು ಆಶ್ರಮದ ಅನಾಥರೊಂದಿಗೆ ವಿನೂತನ ಮಾದರಿಯ ಕಾರ್ಯಕ್ರಮಗಳನ್ನು ನೀಡಿ ವಿವಿಧ ಪರಿಕರಗಳು ಸೇರಿದಂತೆ ಆರ್ಥಿಕ ಸಹಾಯಹಸ್ತ ಚಾಚಿದೆ. ಅಷ್ಟಲ್ಲದೆ ಅಲ್ಲಿನ ಅನಾಥರೊಂದಿಗೆ ಭಜನೆ,ಸಂಗೀತ,ನೃತ್ಯ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಆನಾಥರ ಮನ ಗೆದ್ದಿದ್ದಾರೆ.ಈ ಸಂದರ್ಭದಲ್ಲಿ ಸ್ನೇಹಕೂಟದ ಸಂಚಾಲಕಿ ಭಾರತಿ.ವಿ.ಮಯ್ಯ,ಚಂದ್ರಿಕಾ ಭಟ್,ಸಾವಿತ್ರಿ ಮಯ್ಯ,ಹೊಸಬದುಕು ಆಶ್ರಮದ ಮುಖ್ಯಸ್ಥರಾದ ವಿನಯಚಂದ್ರ ಸಾಸ್ತಾನ,ನಿತ್ಯಾನಂದ ವಳಕಾಡು, ರಾಜೇಶ್ವರಿ ವಿ.ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ಸ್ನೇಹಕೂಟದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರು.