ಮಂಗಳೂರು : ಕರಾವಳಿ ಪ್ರದೇಶದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಬಿಸಿಲು ಲಭ್ಯ ಇರುವುದರಿಂದ ಮಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬೃಹತ್ ಸೋಲಾರ್ ಸ್ಟೇಷನ್ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಮಾಹಿತಿ ನೀಡಿದರು. ಅವರು ಮಂಗಳವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸೋಲಾರ್ ವಿದ್ಯುತ್ ಉತ್ಪಾದನೆ ಸಮುದ್ರದ ನೀರಿನ ಬಳಕೆಯನ್ನೂ ಮಾಡಬೇಕಿದ್ದರಿಂದ ಮಂಗಳೂರಿನಲ್ಲಿಯೇ ಆರಂಭಿಸಲಾಗುವುದು. ಈ ಯೋಜನೆಗೆ ಸುಮಾರು 30 ಸಾವಿರ ಕೋಟಿ ರೂಪಾಯಿಗೂ ಅಧಿಕ ಬಜೆಟ್ ಬೇಕಾಗುತ್ತದೆ ಎಂದರು. ಇನ್ನೊಂದು ಸಮಸ್ಯೆ ಏನೆಂದರೆ, ಈ ಸೋಲಾರ್ ಸ್ಟೇಷನ್ ಕಾರ್ಯಾಚರಿಸಲು 5 ಸಾವಿರ ಮೆ.ವ್ಯಾ. ವಿದ್ಯುತ್ ಬೇಕಾಗುತ್ತದೆ. ಹೀಗಾಗಿ ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಪಾವಗಡದಲ್ಲೂ ಸೋಲಾರ್‌ನ ಪೈಲೆಟ್ ಪ್ರೊಜೆಕ್ಟ್ ಮಾಡಲಾಗುವುದು ಎಂದರು