Home » ಊರ ಹಬ್ಬದಂತೆ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ
 

ಊರ ಹಬ್ಬದಂತೆ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ

ಶಾಸಕ ಎ. ಕಿರಣ್ ಕೊಡ್ಗಿ

by Kundapur Xpress
Spread the love

ಕುಂದಾಪುರ :ನಿರಂತರ ಎರಡು ತಿಂಗಳಿನಿಂದ ಶ್ರಮಪಟ್ಟು ಸುಂದರವಾದ ಕ್ರೀಡಾಂಗಣವನ್ನು ನಿರ್ಮಾಣ ಮಾಡಿ ಕ್ರೀಡಾಕೂಟವನ್ನ ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಇಂದು ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರಕಾರಿ ಪ್ರೌಢಶಾಲೆ ವಕ್ವಾಡಿ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ 14 ಮತ್ತು 17 ರ ಬಾಲಕ ಬಾಲಕಿಯರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಭಾಗವಹಿಸಿ ಊರ ಹಬ್ಬದಂತೆ ಕ್ರೀಡಾಕೂಟ ಆಯೋಜನೆ ಮಾಡಿ ಕುಂದಾಪುರ ತಾಲೂಕಿಗೆ ಮಾದರಿಯಾಗಿದೆ ಎಂದು ಕ್ರೀಡಾಕೂಟಕ್ಕೆ ಹಾಗೂ ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶಾಸಕರುಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮಂಜುನಾಥ ಶೆಟ್ಟಿಗಾರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಕಾಳವರ, ರಾಜು ಕುಲಾಲ್ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಸರಕಾರಿ ಪ್ರೌಢಶಾಲೆ ವಕ್ವಾಡಿ, ಪ್ರವೀಣ್ ಕುಮಾರ್ ಶೆಟ್ಟಿ ಸಣಗಾಲ್ ಮನೆ ವಕ್ವಾಡಿ ಅಧ್ಯಕ್ಷರು ಕ್ರೀಡಾಕೂಟ ಸಮಿತಿ,, ಶ್ರೀಮತಿ ಶೋಭಾ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಂದಾಪುರ, ಶ್ರೀಮತಿ ಸುಜಾತಾ. ಬಿ. ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ವಕ್ವಾಡಿ,ಸತ್ಯನಾರಾಯಣ.ಜಿ. ದೈಹಿಕ ಶಿಕ್ಷಣ ಪದವಿವೀಕ್ಷಣಾಧಿಕಾರಿಗಳು ಕುಂದಾಪುರ,,ಕುಸುಮಕರ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಪ್ರೌಢಶಾಲೆ ವಕ್ವಾಡಿ,ಚಂದ್ರ ನಾಯ್ಕ, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕುಂದಾಪುರ, ರಮೇಶ್ ಶೆಟ್ಟಿ ಸದಸ್ಯರು ಎಸ್ ಡಿ ಎಂ ಸಿ ಮತ್ತು ಗ್ರಾಮ ಪಂಚಾಯತ್ ಕಾಳವರ,ಸತೀಶ್ ಪೂಜಾರಿ ವಕ್ವಾಡಿ ಕಾರ್ಯದರ್ಶಿ ಕ್ರೀಡಾಕೂಟ ಸಮಿತಿ,, ವಿ.ಕೆ. ಶೆಟ್ಟಿ ವಕ್ವಾಡಿ ಖಜಾಂಜಿ ಕ್ರೀಡಾಕೂಟ ಸಮಿತಿ, ಶ್ರೀಮತಿ ಭಾರತಿ ಅಧ್ಯಕ್ಷರು ಸಾಮಾಜಿಕ ನ್ಯಾಯ ಸಮಿತಿ ಗ್ರಾಮ ಪಂಚಾಯತ್ ಕಾಳವರ,ಅನಂತ ಪದ್ಮನಾಭ ಶೆಟ್ಟಿಗಾರ್ ಅಧ್ಯಕ್ಷರು ಶಾರಾಭಿವೃದ್ಧಿ ಮತ್ತು ಮೇಲ್ವಿಸ್ತುವಾರಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಕ್ವಾಡಿ, ಶ್ರೀಮತಿ ಅನಿತಾ ಶೆಟ್ಟಿ ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಕ್ವಾಡಿ, ಬಾಲಕೃಷ್ಣ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರ, ಸದಾನಂದ ಶೆಟ್ಟಿ ಕುವೆಂಪು ಹಿರಿಯ ಪ್ರಾಥಮಿಕ ಶಾಲೆ ತೆಕ್ಕಟ್ಟೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಎಲ್ಲಾ ಶಿಕ್ಷಕ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಾಗೂ ಶಾಲೆಯ ಅಧ್ಯಾಪಕ ವೃಂದದವರು , ಕ್ರೀಡಾಕೂಟ ಸಮಿತಿಯ ಸದಸ್ಯರು ಗ್ರಾಮ ಪಂಚಾಯಿತಿನ ಸದಸ್ಯರು, ಊರಿನ ಪ್ರಮುಖರು, ಗ್ರಾಮಸ್ಥರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Related Articles

error: Content is protected !!