ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರ ಕಾಡು ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಿನಿ ರಾಜೇಶ್ ಶೆಟ್ಟಿ NIS ಅಥ್ಲೆಟಿಕ್ ಕೋಚ್, ಅವರು ಕ್ರೀಡೆ ಕಲಿಕೆಗೆ ಪೂರಕವೇ ಹೊರತು ಮಾರಕವಲ್ಲ. ಸ್ವಾಸ್ಥ್ಯ ಆರೋಗ್ಯಕ್ಕೆ ಕ್ರೀಡೆ ಅತಿ ಅಗತ್ಯ. ದಿನದಲ್ಲಿ ಒಂದು ಗಂಟೆಯಾದರೂ ಕ್ರೀಡೆಗೆ ಸಮಯವನ್ನು ಕೊಡುವುದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆದು ಎಂದರು. ಅಧ್ಯಕ್ಷತೆಯನ್ನು ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ವಹಿಸಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿ ನಮಿತಾ ಜಿ ಭಟ್ , ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರು ಡಾ. ಅನಂತ್ ಪೈ , , ಕ್ರೀಡಾ ನಿರ್ದೇಶಕ ಶಶಿಕಿರಣ್, ದೈಹಿಕ ಶಿಕ್ಷಕರಾದ ಪ್ರಭಾಕರ್ ಹಾಗೂ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕರು ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.