ಕುಂದಾಪುರ : ನಮ್ಮ ಪೂರ್ವಜರ ಕಾಲದಲ್ಲಿ ಈ ದೇಶದಲ್ಲಿ ಉಚಿತವಾಗಿ ದೊರೆಯತ್ತಿದ್ದ ಶಿಕ್ಷಣ, ಆರೋಗ್ಯ, ಆಹಾರ ವ್ಯವಸ್ಥೆಗಳು ಇಂದು ವ್ಯಾಪಾರೀಕರಣಗೊಂಡಿವೆ ಅದರಲ್ಲಿ ಶಿಕ್ಷಣ ಕ್ಷೇತ್ರವಂತೂ ವೇಗದಲ್ಲಿ ವಾಣಿಜ್ಯ ಉದ್ಯಮದಂತಾಗಿದೆ ಈ ಕಾಲದಲ್ಲಿ ಅತಿ ಕಡಿಮೆ ಶುಲ್ಕ ಅಥವಾ ಉಚಿತವಾಗಿ ಕೆಲವು ಸಂಸ್ಥೆಗಳು ಶಿಕ್ಷಣವನ್ನು ನೀಡುತ್ತಿವೆ ಅಂತಹ ಸಂಸ್ಥೆಗಳ ಸಾಲಿನಲ್ಲಿ ಶ್ರೀ ರಾಮ ವಿದ್ಯಾಕೇಂದ್ರ ಗುರುತಿಸಿಕೊಂಡಿರವುದು ಹೆಮ್ಮೆಯ ವಿಚಾರ ಎಂದು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿಗಳಾದ ಕೃಷ್ಣಪ್ರಸಾದ್ ಅಡ್ಯಂತಾಯರವರು ನುಡಿದರು ಅವರು ಕೋಡಿಯ ಶ್ರೀರಾಮ ನಗರದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರದ ಶಾಲಾ ವಾರ್ಷೀಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಘ್ನೇಶ್ವರ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಇದರ ಪಾಲುದಾರರಾದ ಮಹೇಶ್ ಬೆಟ್ಟಿನ್ ಮಾತನಾಡಿ ಮಾನವಿಯ ಮೌಲ್ಯಗಳು ನಶಿಸುತ್ತಿರುವ ಈ ಮೊಬೈಲ್ ಯುಗದಲ್ಲಿ ಹೊರಗಿನ ಶಿಕ್ಷಣದ ಜತೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಮಹತ್ತರ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಶುಭ ಹಾರೈಸಿದರು
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಹೆಸರು ತಂದ 9ನೇ ತರಗತಿ ವಿದ್ಯಾರ್ಥಿನಿ ಸಿಂಚನಳನ್ನು ಸನ್ಮಾನಿಸಲಾಯಿತು ವಿದ್ಯಾರ್ಥಿನಿ ವೈಷ್ಣವಿ ಸ್ವಾಗತಿಸಿ ದೀಕ್ಷ ಧನ್ಯವಾದ ಸಮರ್ಪಿಸಿದರು ಶ್ರೀಮತಿ ರಶ್ಮಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವೆಬ್‌ಸೈಟ್‌ಗೆ ಕೃಷ್ಣಪ್ರಸಾದ್ ಅಡ್ಯಂತಾಯ ಚಾಲನೆ ನೀಡಿದರು