ಕುಂದಾಪುರ : ಕುಂದಾಪುರದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನಿಂದ ಅಪ್ರತಿಮ ಸಂಗೀತ ನಿರ್ದೇಶಕ ಹಾಗೂ ಸಂಗೀತ ಸಂಯೋಜಕರಾದ ರವಿ ಬಸ್ರೂರು ಇವರನ್ನು ಲಿಟಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ನಡೆದ ಸುನಾದ ಸಂಗಮದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಸಮಾರಂಭದ ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರು ವಹಿಸಿದ್ದರು
ರವಿ ಬಸ್ರೂರು ಇವರು 1984 ಜನವರಿ1 ರಂದು ಬಸ್ರೂರಿನಲ್ಲಿ ಜನಿಸಿ ಕುಂದಾಪುರದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದು ಅತ್ಯುತ್ತಮ ಗಾಯಕ ಪ್ರಶಸ್ತಿ ಸಂಗೀತ ನಿರ್ದೇಶಕ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು ಅನೇಕ ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದು ವಿವಿಧ ಭಾಷೆಗಳಲ್ಲಿ ತೆರೆಕಂಡ ಕೆಜಿಎಫ್ ಸಿನಿಮಾವು ಸಂಗೀತ ಕ್ಷೇತ್ರದಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ ತನ್ನ ಹುಟ್ಟೂರಾದ ಬಸ್ರೂರಿನಲ್ಲಿ ಇವರು ಸ್ಥಾಪಿಸಿದ ಅತ್ಯಾಧುನಿಕವಾದ ತಂತ್ರಜ್ಞಾನವುಳ್ಳ ಸಂಗೀತ ಸ್ಟುಡಿಯೋ ಬಸ್ರೂರಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದು ಉಗ್ರಂ ಚಿತ್ರದ ಸಂಗೀತ ನಿರ್ಧೇಶನವು ಇವರ ಮುಕುಟ ಕೀರೀಟಕ್ಕೆ ಚಿನ್ನದ ಗರಿಯೊಂದು ಸೇರ್ಪಡೆಯಾಗಿದೆ
ವೇದಿಕೆಯಲ್ಲಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಖಜಾಂಚಿಗಳಾದ ಭರತ್ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಅಗಸ್ಟೀನ್ ಹಾಗೂ ವಿವಿಧ ಚಟುವಟಿಕೆಗಳ ತರಬೇತಿದಾರರು ಉಪಸ್ಥಿತರಿದ್ದರು ಶಿಕ್ಷಕಿ ಸರೋಜಿನಿ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಭರತ್ ಶೆಟ್ಟಿ ಸ್ವಾಗತಿಸಿ ಪ್ರೀತಿ.ಸಿ ಇವರು ವಂದಿಸಿದರು