ನವದೆಹಲಿ : ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮಲಲಾ ಪ್ರಾಣಪ್ರತಿಷ್ಠೆ ನೆರವೇರಿಸಿದ ಒಂದು ತಿಂಗಳೊಳಗೆ ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯಲ್ಲಿ ಮೊದಲ ಹಿಂದು ದೇವಾಲಯವನ್ನು ಬುಧವಾರ ಉದ್ಘಾಟಿಸಿದ್ದು, ಜಗತ್ತಿನಾದ್ಯಂತವಿರುವ ಸನಾತನ ಧರ್ಮೀಯರ ಧಾರ್ಮಿಕ ಭಾವನೆಗೆ ಬಹುದೊಡ್ಡ ಕೊಡುಗೆಯಾಗಿದೆ. ಸ್ವಾಮಿನಾರಾಯಣ ಪಂಥದ ಆಧ್ಯಾತ್ಮಿಕ ನಾಯಕರ ಸಮ್ಮುಖದಲ್ಲಿ ಮಂತ್ರಘೋಷಗಳ ನಡುವೆ ಧಾರ್ಮಿಕ ವಿಧಿ-ವಿಧಾನದೊಂದಿಗೆ ಮೋದಿ ಅಬುಧಾಬಿಯ ಬಹುನಿರೀಕ್ಷಿತ ಹಿಂದು ದೇವಾಲಯವನ್ನು ಲೋಕಾರ್ಪಣೆ ಮಾಡಿದರು.
2019ರಲ್ಲಿ ದೇವಾಲಯ ನಿರ್ಮಾಣಕ್ಕೆ ಮೋದಿ ಅವರೇ ಭೂಮಿಪೂಜೆ ನೆರವೇರಿಸಿದ್ದರು ಎನ್ನುವುದು ಗಮನಾರ್ಹ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾನ (ಬಿಎಪಿಎಸ್) ನಿರ್ಮಿಸಿರುವ ಜಗತ್ತಿನಾದ್ಯಂತವಿರುವ ಸ್ವಾಮಿನಾರಾಯಣ ಪಂಥದ ಸುಮಾರು 1,200 ದೇವಾಲಯಗಳಲ್ಲಿ ಏಕಕಾಲದಲ್ಲಿ ನೆರವೇರಿದ ವಿಶ್ವ ಆರತಿಯಲ್ಲಿಯೂ ಪ್ರಧಾನಿ ಭಾಗಿಯಾದರು