ಮಿಥ್ಯಾರೋಪ ಸರಿಯಲ್ಲ : ವಿಶ್ವಪ್ರಸನ್ನತೀರ್ಥ ಶ್ರೀ
ತುಮಕೂರು: ಶ್ರೀಕೃಷ್ಣ ಮಠದ ಜಾಗವನ್ನು ನಮ್ಮ ಗುರುಗಳಾದ ಮಧ್ವಾಚಾರ್ಯರಿಗೆ ದಾನವನ್ನಾಗಿ ನೀಡಿದವರು ರಾಮಭೋಜ ಎಂಬ ಹಿಂದೂ ಅರಸರೇ ಹೊರತು ಮುಸ್ಲಿಂ ಅರಸರಲ್ಲ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥಶ್ರೀಗಳು ಸ್ಪಷ್ಟ ಪಡಿಸಿದ್ದಾರೆ.
ತುಮಕೂರಿನ ಶ್ರೀಕೃಷ್ಣ ಮಠದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷ್ಣ ಮಠ ಇರುವ ಜಾಗ ಮುಸಲ್ಮಾನ ಅರಸರು ದಾನ ನೀಡಿದ ಜಾಗವೆಂದು ಹೇಳುವವರು ಅವರ ಹೇಳಿಕೆಗೆ ಸಂಬಂಧಪಟ್ಟಂತೆ ದಾಖಲೆ ನೀಡಬೇಕು. ಅದು ಬಿಟ್ಟು ಮನಸೋ ಇಚ್ಚೆ ಆಧಾರ ರಹಿತ ಹೇಳಿಕೆ ನೀಡುವುದು ತರವಲ್ಲ ಎಂದರು. ಪೇಜಾವರ ಮಠಕ್ಕೆ ಮುಸಲ್ಮಾನ ಅರಸರು ನೆರವು ನೀಡಿದರು ಎಂದು ಮಿಥುನ್ ರೈ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಆ ಘಟನೆ ಆಗಿರುವುದು. ಮಧ್ವಾಚಾರ್ಯರ ಕಾಲದಲ್ಲಿ, ಆಗ ಮಧ್ವಾಚಾರ್ಯರು ತಮ್ಮ ಶಿಷ್ಯರ ಜತೆಯಲ್ಲಿ ಬದರಿ ಯಾತ್ರೆ ಹೋಗುವ ಸಂದರ್ಭದಲ್ಲಿ ಗಂಗಾ ನದಿಯನ್ನು ದಾಟಬೇಕಾಗುತ್ತದೆ. ಆಗ ಅಂದಿನ ಮುಸ್ಲಿಂ ರಾಜ ಅಡ್ಡಿಪಡಿಸುತ್ತಾನೆ.
ಆಗ ಗಂಗಾನದಿಯೇ ಗುರುಗಳಿಗೆ ದಾರಿ ಬಿಡುತ್ತದೆ. ಆಗ ಮುಸಲ್ಮಾನ ಅರಸ ತನ್ನ ಅರ್ಧ ರಾಜ್ಯ ಕೊಡುವುದಾಗಿ ಹೇಳುತ್ತಾನೆ. ಅದನ್ನು ತಪ್ಪಾಗಿ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಮಠದಲ್ಲಿ ಇವೆ. ದಾಖಲೆಗಳು ಇಲ್ಲದೆ ಈ ರೀತಿಯ ಮಿಥ್ಯಾರೋಪ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.
ಇತ್ತೀಚಿಗೆ ಉಡುಪಿ ಮಠಕಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಕಾಂಗ್ರೆಸ್ ನಾಯಕ ಮಿಥುನ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದರು