Home » ಈಜುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ
 

ಈಜುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ

ಕೋಡಿಯಲ್ಲಿ ಎಚ್ಚರಿಕೆಯ ಫಲಕ

by Kundapur Xpress
Spread the love

ಕುಂದಾಪುರ : ನಗರದ ಪುರಸಭಾ ವ್ಯಾಪ್ತಿಯ ಕೋಡಿ ಕಡಲ ಕಿನಾರೆಯು  ಅತ್ಯಂತ ಸುಂದರವಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯತ್ತಿದೆ  ರಮ್ಯ ಹಾಗೂ ನಯನ ಮನೋಹರವಾದ ಸಮುದ್ರದ ಹಾಲಿನ ತೊರೆಯಲ್ಲಿ ಹಲವು ಜೀವಗಳ ಆಪೋಶನವಾದರೂ  ಕೂಡ ಮತ್ತೇ ಮತ್ತೇ ಆಗಮಿಸುವ ಪ್ರವಾಸಿಗರ ದಂಡು ನೀರಿನ ತೊರೆಗೆ ಮನಸೋತು ಸಮುದ್ರಕ್ಕೆ ಇಳಿಯುತ್ತಾರೆ ಯಾರು ಹೇಳಿದರೂ ಕೇಳುವುದಿಲ್ಲಅವಗಢದ ನಂತರ ಪರಿತಪಿಸುತ್ತಾರೆ

ಇದನ್ನು ಮನಗಂಡ  ಕೋಡಿಯ ಅಶೋಕ್‌ ಪೂಜಾರಿಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಕೋಡಿಯ ಸಮಾನ ಮನಸ್ಕರಿಂದ ದೇಣಿಗೆಗಳನ್ನು ಸಂಗ್ರಹಿಸಿ ಎಚ್ಚರಿಕೆಯ ನಾಮಫಲಕಗಳನ್ನು ಕೋಡಿ ಕಿನಾರೆಯ ಅವಘಡದ ಸ್ಥಳಗಳಲ್ಲಿ ಅಳವಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ಅವರನ್ನು ಅಭಿನಂದಿಸಲೇಬೇಕಾಗಿದೆ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ

ಮುಂದೆಯೂ ಕೂಡ ಸಾರ್ವಜನಿಕರ ನೆರವಿನಿಂದ ಇನ್ನಷ್ಟು ಎಚ್ಚರಿಕೆಯ ನಾಮ ಫಲಕಗಳು ಕೋಡಿಯ ಕಡಲ ಕಿನಾರೆಯಲ್ಲಿ ಅಳವಡಿಸಲಿ ಹಾಗೂ ಆಗಮಿಸುವ ಪ್ರವಾಸಿಗರ ಜೀವ ರಕ್ಷಣೆಯೇ ಇವರ ಧ್ಯೇಯವಾಗಲಿ ಎಂಬುದೇ ನಮ್ಮೇಲ್ಲರ ಮನದಾಳದ ಹಾರೈಕೆ

ಕೆ.ಗಣೇಶ್‌ ಹೆಗ್ಡೆ ಕುಂದಾಪುರ

 

Related Articles

error: Content is protected !!